ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕಿನಿಂದ ಕಂಪ್ಲಿ ಪುರಸಭೆ ಸದಸ್ಯರೊಬ್ಬರು ಗುಣಮುಖರಾಗಿದ್ದು, ಕೋವಿಡ್ ಸೆಂಟರ್ನಿಂದ ಡಿಸ್ಚಾರ್ಜ್ ಆಗಿದ್ದಾರೆ.
ನಗರದ ವಿಮ್ಸ್ ಸರ್ಕಾರಿ ಡೆಂಟಲ್ ಕಾಲೇಜಿನ ಕೋವಿಡ್ ಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಕಂಪ್ಲಿ ಪುರಸಭೆ ಸದಸ್ಯ ಚಾಂದ್ ಪಾಷ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಚಾಂದ್ ಪಾಷ ಕೊರೊನಾ ಸೋಂಕಿತರ ವಾರ್ಡ್ನಲ್ಲಿ ದಾಖಲಾಗಿದ್ದಾಗ ಸೋಂಕಿತರಿಗೆ ವಿವಿಧ ಯೋಗಾಸದ ಭಂಗಿಗಳು, ಸೂರ್ಯ ನಮಸ್ಕಾರ ಕಲಿಸುತ್ತಿದ್ದರು. ಹಾಗೆಯೇ ಸೋಂಕಿತರಿಗೆ ಕಷಾಯ ವಿತರಿಸುವ ಮೂಲಕ ಗಮನ ಸೆಳೆದಿದ್ದರು.