ಹೊಸಪೇಟೆ : ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ ತಾಲೂಕಿನ ಮರಿಯಮ್ಮನಹಳ್ಳಿ ಭಾಗದ ಗ್ರಾಮಗಳಲ್ಲಿನ ಮನೆಗಳು ಕುಸಿದು ಹೋಗಿದ್ದು, ಅಲ್ಲಿನ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ತಾಲೂಕಿನಲ್ಲಿ ಸತತ ಏಳು ದಿನಗಳಿಂದ ಮಳೆಯಾಗಿದ್ದು, ಮರಿಯಮ್ಮನಹಳ್ಳಿ ಭಾಗದ ಗ್ರಾಮಗಳಲ್ಲಿ ಮಣ್ಣಿನ ಮನೆಗಗಳು ಭಾಗಶಃ ಕುಸಿದಿವೆ. ಇದರಿಂದ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ
ಮರಿಮ್ಮನಹಳ್ಳಿ ಭಾಗದ ಪೊತಲಕಟ್ಟೆ, ತಿಮ್ಮಲಾಪುರ, ಹಂಪಿನಕಟ್ಟೆ ಗ್ರಾಮಗಳಲ್ಲಿ ಒಟ್ಟು ಐದು ಮನೆಗಳು ಕುಸಿದಿದೆ. ಈ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷ ಅನ್ನದಾನಯ್ಯ ಗೌಡ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು.