ETV Bharat / state

ಸ್ಮಾರ್ಟ್‌ ಸಿಟಿ ಯೋಜನೆಗೆ ಬಳ್ಳಾರಿ ಸೇರ್ಪಡೆಗೊಳಿಸುವಂತೆ ಸಂಸದ ವೈ. ದೇವೇಂದ್ರಪ್ಪ ಮನವಿ....

ಸ್ಮಾರ್ಟ್‌ ಸಿಟಿ ಯೋಜನೆಯ ಅಡಿಯಲ್ಲಿ ಬಳ್ಳಾರಿಯನ್ನು ಸೇರ್ಪಡೆಗೊಳಿಸಿಕೊಳ್ಳುವುದರಿಂದ ನಗರದ ಮೂಲಭೂತ ಸೌಕರ್ಯಗಳು ಹೆಚ್ಚಾಗುತ್ತವೆ. ಅಲ್ಲದೆ ಈ ಭಾಗದಲ್ಲಿ ಆರ್ಥಿಕತೆಗೆ ಪುಷ್ಠಿಯನ್ನು ನೀಡುತ್ತವೆ ಎಂದು ಸಂಸದ ವೈ. ದೇವೇಂದ್ರಪ್ಪ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ವಿವರಿಸಿದ್ದಾರೆ.

MP Y. Devendrappa appeals to Nirmala Sitharaman
ಸಂಸದ ವೈ. ದೇವೇಂದ್ರಪ್ಪ ಮನವಿ
author img

By

Published : Oct 4, 2020, 7:21 PM IST

ಬಳ್ಳಾರಿ: ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ಬಳ್ಳಾರಿ ನಗರವನ್ನು ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಗೆ ಸೇರ್ಪಡೆಗೊಳಿಸುವಂತೆ ಸಂಸದ ವೈ. ದೇವೇಂದ್ರಪ್ಪ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದ ಅವರು, ತಮ್ಮ ಮನವಿ ಪತ್ರದಲ್ಲಿ ಬಳ್ಳಾರಿ ಹಾಗೂ ಕಲಬುರ್ಗಿ ಮಾತ್ರ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ನಗರಪಾಲಿಕೆಗಳಾಗಿವೆ. ಅತ್ಯಂತ ಹಳೆಯ ನಗರವಾಗಿರುವ ಬಳ್ಳಾರಿ ಆರ್ಥಿಕತೆಯ ಪ್ರಮುಖ ಕೇಂದ್ರವಾಗಿದೆ. ರಾಜ್ಯದ ಎರಡು ಜಿಲ್ಲೆಗಳು ಹಾಗೂ ಆಂಧ್ರ ಪ್ರದೇಶ ರಾಜ್ಯದ ಮೂರು ಜಿಲ್ಲೆಗಳ ಮಧ್ಯೆ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ ಎಂದು ವಿವರಿಸಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆಯ ಅಡಿಯಲ್ಲಿ ಬಳ್ಳಾರಿಯನ್ನು ಸೇರ್ಪಡೆಗೊಳಿಸಿಕೊಳ್ಳುವುದರಿಂದ ನಗರದ ಮೂಲಭೂತ ಸೌಕರ್ಯಗಳು ಹೆಚ್ಚಾಗುತ್ತವೆ. ಅಲ್ಲದೆ ಈ ಭಾಗದಲ್ಲಿ ಆರ್ಥಿಕತೆಗೆ ಪುಷ್ಠಿಯನ್ನು ನೀಡುತ್ತವೆ. ಈ ಪತ್ರದ ಜೊತೆಯಲ್ಲಿ ಬಳ್ಳಾರಿ ನಗರದ ಬಗ್ಗೆ ಸಣ್ಣ ಪುಸ್ತಿಕೆಯನ್ನು ನೀಡಿದ್ದು, ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಅಳವಡಿಸಿಕೊಳ್ಳುವುದರಿಂದ ಈ ಭಾಗದ ಭೌಗೋಳಿಕ ಹಾಗೂ ಜನಸಂಪನ್ಮೂಲದ ಅಭಿವೃದ್ದಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.