ಬಳ್ಳಾರಿ: ಸುಮಾರು 60ಕ್ಕೂ ಹೆಚ್ಚು ಕುರಿಗಳು ಕುರಿಮಂದೆಯಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ತೋರಣಗಲ್ಲು ವ್ಯಾಪ್ತಿಯ ಮದಿರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ವಿಠಲಾಪುರ ಗ್ರಾಮದ ಕುರುಬರ ಮೂರಣ್ಣಿ ತಿಪ್ಪಯ್ಯ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದೆ. ಕುರಿಮಂದೆಯ ಹಟ್ಟಿಯಲ್ಲೇ ಈ ಕುರಿಗಳು ಸಾವನ್ನಪ್ಪಿದ್ದು, ಹೊಟ್ಟೆ ಉಬ್ಬರ ಸೇರಿದಂತೆ ಇನ್ನಿತರೆ ವಿಲಕ್ಷಣ ಗುಣಲಕ್ಷಣಗಳು ಕಂಡುಬಂದಿವೆ. ಇನ್ನು ಈ ಕುರಿಗಳ ಸಾವಿಗೆ ನಿಖರವಾದ ಕಾರಣ ತಿಳಿದಿಬಂದಿಲ್ಲ.