ETV Bharat / state

ಬಳ್ಳಾರಿಯಲ್ಲಿ ಬ್ಯಾಂಕ್​ ಗ್ರಾಹಕನ ಲಕ್ಷಗಟ್ಟಲೆ ಹಣ ಕದ್ದೊಯ್ದ ಖದೀಮರು: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

ಬಳ್ಳಾರಿ‌ಯಲ್ಲಿ ವ್ಯಕ್ತಿಯ ಗಮನ ಬೇರೆಡೆ ಸೆಳೆದು 3 ಲಕ್ಷದ 20 ಸಾವಿರ ಹಣ ಕಳ್ಳತನ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದ್ದು, ಈ ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ballari
ಹಣ ಕಳ್ಳತನ
author img

By

Published : Feb 6, 2020, 1:21 PM IST

Updated : Feb 9, 2020, 12:53 PM IST

ಬಳ್ಳಾರಿ‌: ನಗರದಲ್ಲಿ ವ್ಯಕ್ತಿವೋರ್ವನ ಗಮನ ಬೇರೆಡೆ ಸೆಳೆದು ಖದೀಮರು ಬರೋಬ್ಬರಿ 3 ಲಕ್ಷದ 20 ಸಾವಿರ ರೂಪಾಯಿ ನಗದನ್ನು ಕದ್ದೊಯ್ದಿದ್ದಾರೆ. ಕಳ್ಳರ ಈ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಣ ಕಳ್ಳತನ ಮಾಡಿದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿನ ಖಾಸಗಿ ಬ್ಯಾಂಕ್​ನಿಂದ ಗ್ರಾಹಕನೋರ್ವ ತನ್ನ ಖಾತೆಯಿಂದ ಫೆಬ್ರವರಿ 2 ರಂದು ಮಧ್ಯಾಹ್ನ 12.30ರ ಸಮಯದಲ್ಲಿ 3 ಲಕ್ಷದ 20 ಸಾವಿರ ರೂಪಾಯಿ ಹಣವನ್ನು ಬಿಡಿಸಿಕೊಂಡು ಬಂದು ತನ್ನ ಬೈಕ್ ಮೇಲಿನ ಟ್ಯಾಂಕರ್ ಕವರ್​ನಲ್ಲಿ ಇಟ್ಟಿದ್ದರು. ಇದನ್ನು ಗಮನಿಸಿದ ಇಬ್ಬರು ಖದೀಮರು ಆ ಹಣವನ್ನು ಕದ್ದು ಬೈಕ್​ನಲ್ಲಿ ಪರಾರಿಯಾಗಿದ್ದಾರೆ.

ಬ್ಯಾಂಕ್​ ಗ್ರಾಹಕನ ಗಮನವನ್ನು ಬೇರೆಡೆ ಸೆಳೆದು ಲಕ್ಷ ಲಕ್ಷ ಹಣವನ್ನು ಕಳ್ಳತನ ಮಾಡಿ ಪರಾರಿಯಾದವರು ಯಾರು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಬ್ರೂಸ್ ಪೇಟೆ ಠಾಣೆಯ ಸಿಪಿಐ ನಾಗರಾಜ್ ಅವರು ದೂರವಾಣಿ ಮೂಲಕ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.

Last Updated : Feb 9, 2020, 12:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.