ಬಳ್ಳಾರಿ: ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಒಬ್ಬರಿಗೆ ಈ ಮಹಾಮಾರಿ ಕೊರೊನಾ ವೈರಸ್ ಬಂದ್ರೆ ಸಾಕು ಐನೂರು ಮಂದಿಗೆ ಹಬ್ಬುತ್ತೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದರು.
ದಿನಸಿ ಕಿಟ್ ವಿತರಣೆ ವೇಳೆ ಸಾಲು ಸಾಲಾಗಿ ನಿಂತಿದ್ದವರ ಬಳಿ ಕೈ ಮುಗಿದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿ ಗಮನ ಸೆಳೆದರು. ಇಲ್ಲಿನ ವಿದ್ಯಾನಗರದ ಬಿಜೆಪಿ ಮುಖಂಡರಾದ ಬಿ.ಜಗದೀಶ ಹಾಗೂ ಮಾರೆಣ್ಣ ಎಂಬುವರ ಮನೆ ಮುಂಭಾಗದಲ್ಲಿ ಆಯೋಜಿಸಿದ್ದ ದಿನಸಿ ಕಿಟ್ ವಿತರಣೆಗೂ ಮುನ್ನ ಶಾಸಕ ಸೋಮಶೇಖರ ರೆಡ್ಡಿ ಸ್ಥಳಕ್ಕಾಗಮಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ರು.
ತಮ್ಮ ಕೈಯನ್ನು ಮುಂದೆ ಚಾಚುತ್ತಲೇ ಇಷ್ಟೊಂದು ಅಂತರ ಕಾಯ್ದುಕೊಳ್ಳುವಂತೆ ಕೋರಿದ್ದಾರೆ. ಬಿರು ಬಿಸಿಲಿನಲ್ಲೇ ಸಾಲು ಸಾಲಾಗಿ ನಿಂತುಕೊಂಡೇ ಸುಸ್ತಾದ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪಾಠ ಮಾಡಿದ್ರು ಶಾಸಕ ಸೋಮಶೇಖರ ರೆಡ್ಡಿ.