ಬಳ್ಳಾರಿ: ಅಂದಾಜು 40 ಲಕ್ಷ ರೂ.ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಭೂಮಿಪೂಜೆ ನೆರವೇರಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಡಿಎಂಎಫ್ ಅನುದಾನ ಅಡಿಯಲ್ಲಿ ಗಾಂಧಿನಗರ ಮುಖ್ಯ ರಸ್ತೆಯಿಂದ ಸಿದ್ದಾರ್ಥ ಕಾಲೋನಿಗೆ ಸಂಪರ್ಕ ಕಲ್ಪಿಸಲು ಸುಮಾರು 40 ಲಕ್ಷ ರೂ.ವೆಚ್ಚ ತಗಲಿದ್ದು, ಈ ರಸ್ತೆ ಕಾಮಗಾರಿಗೆ ಶಾಸಕರು ಪೂಜೆ ನೆರವೇರಿಸಿದರು.
ಈ ವೇಳೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ರಾಬಕೊ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ್ ರೆಡ್ಡಿ, ಬುಡಾ ಇಂಜಿನಿಯರ್ ರವಿಶಂಕರ್ ಹಾಗೂ ಮುಖಂಡರು ಸೇರಿದಂತೆ ಸ್ಥಳೀಯ ನಿವಾಸಿಗಳು ಇದ್ದರು.