ETV Bharat / state

ಮಾದಿಗರು ತಮ್ಮ ಸಮುದಾಯದ ಅಶಕ್ತರಿಗಾಗಿ ತ್ಯಾಗಿಗಳಾಗಬೇಕು.. ಶಾಸಕ ಸೋಮಶೇಖರ ರೆಡ್ಡಿ - ಶಾಸಕ ಸೋಮಶೇಖರ ರೆಡ್ಡಿ ಲೆಟೆಸ್ಟ್ ನ್ಯೂಸ್

ಇಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಜಿಲ್ಲಾ ಮಾದಿಗ ನೌಕರರ ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

MLA Somashekar reddy
ಶಾಸಕ ಸೋಮಶೇಖರ ರೆಡ್ಡಿ
author img

By

Published : Dec 14, 2019, 8:16 PM IST

ಬಳ್ಳಾರಿ : ಮೀಸಲಾತಿ ಆಧಾರದ ಅಡಿಯಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳಿಗೆ ಒಲಿದು ಬರುವ ದೊಡ್ಡ ದೊಡ್ಡ ಹುದ್ದೆಗಳನ್ನು ಮಾದಿಗ ಸಮುದಾಯದ ಕಡು ಬಡವರಿಗೆ ಬಿಟ್ಟುಕೊಡುವ ಮುಖೇನ ತ್ಯಾಗಿಗಳಾಗಬೇಕೆಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ಸಲಹೆ ನೀಡಿದರು.

ಶಾಸಕ ಸೋಮಶೇಖರ ರೆಡ್ಡಿ..

ನಗರದ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿಂದು ಜಿಲ್ಲಾ ಮಾದಿಗ ನೌಕರರ ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾದಿಗ ಸಮುದಾಯದಲ್ಲಿ ಕಡು ಬಡವರಿದ್ದಾರೆ. ಆ ಸಮುದಾಯದಲ್ಲಿ ಉನ್ನತ ಹುದ್ದೆಗಳನ್ನೂ ಅಲಂಕರಿಸಿದ್ದಾರೆ. ಅವರು ತಮ್ಮ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಉನ್ನತ ಹುದ್ದೆಗಳನ್ನು ತ್ಯಾಗ ಮಾಡಬೇಕು.‌ ಆಗ ಮಾತ್ರ ಈ ಮಾದಿಗ ಸಮುದಾಯ ಶ್ರೇಯೋಭಿವೃದ್ಧಿಯಾಗುತ್ತದೆ ಎಂದರು.

ನಾನು ಈ ಹಿಂದೆ ಶಾಸಕನಾಗಿದ್ದ ವೇಳೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಾದಿಗ ಸಮುದಾಯದವರೊಂದಿಗೆ ಕುಳಿತುಕೊಂಡು ಟೀ ಕುಡಿಯುತ್ತಿದ್ದೆ.‌ ಅನಾಮಧೇಯ ರಾಜಕಾರಣಿಯೊಬ್ಬರು ಅಲ್ಲಿಗೆ ಬಂದು ಮಾದಿಗ ಸಮುದಾಯದವರೊಂದಿಗೆ ಕುಳಿತಿರೋದನ್ನು ಕಂಡು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಲೇ ಮುನ್ನಡೆದರು.‌ ಅವತ್ತು ನಾನು ಈ ಸಮುದಾಯದವರೊಂದಿಗೆ ದುವರ್ತನೆ ತೋರಿದ್ದರೆ, ಇವತ್ತು ನಾನು ಶಾಸಕನಾಗಿ ಇರುತ್ತಿರಲಿಲ್ಲ.‌ ನಾನು ಎಲ್ಲಾ ಸಮುದಾಯದೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವವನು. ಹಾಗಾಗಿ ಈ ಸಮುದಾಯದ ಬಗ್ಗೆ ನನಗೆ ವಿಶೇಷ ಕಾಳಜಿಯಿದೆ ಎಂದರು.

Intro:ಮಾದಿಗರು ತ್ಯಾಗಿಗಳಾಗಬೇಕು: ಶಾಸಕ ಸೋಮಶೇಖರರೆಡ್ಡಿ
ಬಳ್ಳಾರಿ: ಮೀಸಲಾತಿ ಆಧಾರದ ಅಡಿಯಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳಿಗೆ ಒಲಿದ ಬರುವ ದೊಡ್ಡದೊಡ್ಡ ಹುದ್ದೆಗಳನ್ನು ಮಾದಿಗ ಸಮುದಾಯದ ಕಡುಬಡವರಿಗೆ ಬಿಟ್ಟುಕೊಡುವ ಮುಖೇನ ತ್ಯಾಗಿಗಳಾಗಬೇಕೆಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಸಲಹೆ ನೀಡಿದ್ರು.
ಬಳ್ಳಾರಿಯ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿಂದು ಜಿಲ್ಲಾ ಮಾದಿಗ ನೌಕರರ ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮಾದಿಗ ಸಮುದಾಯದಲ್ಲಿ ಕಡುಬಡವರು ಇದ್ದಾರೆ. ಆ ಸಮುದಾಯದಲ್ಲಿ ಉನ್ನತ ಹುದ್ದೆಗಳನ್ನೂ ಅಲಂಕರಿಸಿದ್ದಾರೆ.
ಅವರು ತಮ್ಮ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಗಾಗಿ ಉನ್ನತ ಹುದ್ದೆಗಳನ್ನು ತ್ಯಾಗ ಮಾಡಬೇಕು.‌ ಅಂದಾಗ ಮಾತ್ರ ಈ ಮಾದಿಗ ಸಮುದಾಯ ಶ್ರೇಯೋಭಿವೃದ್ದಿ ಆಗುತ್ತೆ‌ ಎಂದರು.
Body:ನಾನು ಈ ಹಿಂದೆ ಶಾಸಕನಾಗಿದ್ದೆ. ಮಹಾ
ನಗರ ಪಾಲಿಕೆ ಕಚೇರಿಯಲಿ ಮಾದಿಗ ಸಮುದಾಯದವರೊಂದಿಗೆ ಕುಳಿತುಕೊಂಡು ಟೀ ಕುಡಿಯುತ್ತಿದ್ದೆ.‌ ಅನಾಮಧೇಯ ರಾಜಕಾರಣಿಯೊಬ್ಬರು ಅಲ್ಲಿಗೆ ಬಂದ್ರು. ಮಾದಿಗ ಸಮುದಾಯದವರೊಂದಿಗೆ ಕುಳಿತಿರೋದನ್ನು ಕಂಡು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಲೇ ಮುನ್ನಡೆದರು.‌ ಆವತ್ತು ನಾನು ಈ ಸಮುದಾಯದವರೊಂದಿಗೆ ದುವರ್ತನೆ ತೋರಿದ್ದರೆ ಈವತ್ತು ನಾನು ಶಾಸಕನಾಗಿ ಇರುತ್ತಿದ್ದಿಲ್ಲ.‌
ನಾನು ಎಲ್ಲ ಸಮುದಾಯದೊಂದಿಗೂ ಕೂಡ ಉತ್ತಮ ಬಾಂಧವ್ಯ ಹೊಂದಿರುವವನು. ಆಗಾಗಿ, ಈ ಸಮುದಾಯದ ಬಗ್ಗೆ ನನಗೆ ವಿಶೇಷ ಕಾಳಜಿಯಿದೆ ಎಂದ್ರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_MLA_SOMASHEKARREDY_SPCH_VSL_7203310

KN_BLY_5r_MLA_SOMASHEKARREDY_SPCH_VSL_7203310

KN_BLY_5w_MLA_SOMASHEKARREDY_SPCH_VSL_7203310

KN_BLY_5x_MLA_SOMASHEKARREDY_SPCH_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.