ಬಳ್ಳಾರಿ : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗಲು ಕೊನೆಗೂ ಸುಪ್ರೀಂಕೋರ್ಟ್ ನಿನ್ನೆ ಅನುಮತಿ ನೀಡಿದೆ. 8 ವಾರಗಳ ಕಾಲ ಬಳ್ಳಾರಿಯಲ್ಲಿ ತಂಗಲು ಕೋರ್ಟ್ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಯಾವಾಗ ನಗರಕ್ಕೆ ಬರಲಿದ್ದಾರೆ ಅನ್ನೋದರ ಕುರಿತಂತೆ ಸಹೋದರ ಹಾಗೂ ಶಾಸಕ ಸೋಮಶೇಖರ ರೆಡ್ಡಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಶಾಸಕ ಸೋಮಶೇಖರ ರೆಡ್ಡಿ, ಸಹೋದರ ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲಿದ್ದಾರೆ ಎಂಬುದು ಸಂತೋಷದ ವಿಚಾರ. ಈ ಬಗ್ಗೆ ನಗರಕ್ಕೆ ಯಾವಾಗ ಬರಬೇಕು ಎಂಬುದನ್ನು ಸ್ವಾಮಿಗಳನ್ನು ಕೇಳಿದ ನಂತರ ನಿರ್ಧಾರವಾಗುತ್ತೆ ಎಂದು ಹೇಳಿದರು.
10 ವರ್ಷದ ನಂತರ ಜನಾರ್ದನ್ ರೆಡ್ಡಿ ನಗರಕ್ಕೆ ಬರುತ್ತಿದ್ದಾರೆ. ಅವರು ಬರೋದು ಯಾವತ್ತೂ ಪ್ಲಸ್. ಅವರ ಶಕ್ತಿ ಏನು ಅನ್ನೋದು ನನಗೆ ತಿಳಿದಿದೆ. ಅವರ ಆಲೋಚನೆಗಳು ಒಳ್ಳೇವು ಇವೆ. ಬಳ್ಳಾರಿಯನ್ನು ಒಳ್ಳೆ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ ಎಂದರು.
ಇದನ್ನೂ ಓದಿ : ಸಹೋದರ ಬಳ್ಳಾರಿಗೆ ಬರಲು ಸುಪ್ರೀಂ ಅನುಮತಿ ಕೊಟ್ಟಿರೋದು ಸಂತಸ ತಂದಿದೆ: ಶಾಸಕ ಸೋಮಶೇಖರ ರೆಡ್ಡಿ