ಬಳ್ಳಾರಿ: ನಗರದಲ್ಲಿಂದು ನಾನಾ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಭೂಮಿಪೂಜೆ ನೆರವೇರಿಸಿದರು.
ನಗರದ ತಾಳೂರು ರಸ್ತೆಯ ಅಭಿವೃದ್ಧಿ, ಗಾಂಧಿನಗರ ಮುಖ್ಯ ರಸ್ತೆಯಿಂದ ಸತ್ಯನಾರಾಯಣ ಪೇಟೆಗೆ ಸಂಪರ್ಕ ಕಲ್ಪಿಸುವ ಇನ್ನರ್ ರಸ್ತೆ ಹಾಗೂ ಎಂ. ಗೋನಾಳು ಗ್ರಾಮದ ರಸ್ತೆ ಅಭಿವೃದ್ಧಿಗೂ ಚಾಲನೆ ನೀಡಿದರು. ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ತೆಂಗಿನಕಾಯಿ, ಅಗರಬತ್ತಿ ಹೊತ್ತಿಸುವ ಮೂಲಕ ವಿಶೇಷಪೂಜೆ ಸಲ್ಲಿಸಿದರು.
ಮಂಗಳಾರತಿ ಎತ್ತಿದ ರೆಡ್ಡಿ: ಭೂಮಿಪೂಜೆ ವೇಳೆ ಮಂಗಳಾರತಿ ತಟ್ಟೆ ಹಿಡಿದು ಮಂಗಳಾರತಿ ಮಾಡಿದರು. ಬಳಿಕ, ಪರಸ್ಪರ ಸಿಹಿ ತಿನಿಸುವ ಮೂಲಕ ವಿಶೇಷವಾಗಿ ಗಮನ ಸೆಳೆದರು. ಪೂಜೆಯಲ್ಲಿ ಬಳ್ಳಾರಿಯ ಲೋಕಸಭಾ ಸದಸ್ಯ ವೈ.ದೇವೇಂದ್ರಪ್ಪ ಅವರು ಕೂಡಾ ಹಾಜರಿದ್ದರು.