ETV Bharat / state

ನಾಳಿನ ಬಳ್ಳಾರಿ ಬಂದ್​ಗೆ ಶಾಸಕ ನಾಗೇಂದ್ರ ಬೆಂಬಲ - Vijayanagara district formation

ಬಳ್ಳಾರಿ ಜಿಲ್ಲೆ ಆಖಂಡವಾಗಿರಬೇಕು ಇಬ್ಭಾಗವಾಗಬಾರದು ಎಂಬುದು ನನ್ನ ಆಗ್ರಹವಾಗಿದೆ ಎಂದು ಶಾಸಕ ನಾಗೇಂದ್ರ ಹೇಳಿದ್ದಾರೆ.

MLA Nagendra
ಶಾಸಕ ನಾಗೇಂದ್ರ
author img

By

Published : Nov 25, 2020, 2:20 PM IST

ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ನಾಳೆ ನಡೆಯಲಿರುವ ಬಳ್ಳಾರಿ ಬಂದ್​ಗೆ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿಯ ತಾಲೂಕು ಪಂಚಾಯಿತಿ ಕಚೇರಿಯ ಆವರಣದಲ್ಲಿಂದು ನಡೆದ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ.

ಶಾಸಕ ನಾಗೇಂದ್ರ

ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಕುರಿತು ಕಾಂಗ್ರೆಸ್ ಪಕ್ಷ ಸ್ಪಷ್ಟವಾದ ನಿಲುವು ತೋರಿಸಿಲ್ಲ. ಈಗಾಗಲೇ ನಾನೂ ಕೂಡ ಈ ಬಗ್ಗೆ ಸ್ವಷ್ಟ ನಿಲುವು ತಿಳಿಸಿ ಅಂತಾ ಪಕ್ಷದ ಪ್ರಮುಖರಿಗೆ ಮನವಿ ಮಾಡಿರುವೆ. ಅಧಿವೇಶನ ಮುನ್ನ ಸಿಎಲ್​ಪಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುವುದು ಎಂದು ಶಾಸಕ ನಾಗೇಂದ್ರ ಹೇಳಿದ್ದಾರೆ.

ಈ ಜಿಲ್ಲೆ ಅಖಂಡವಾಗಿರಬೇಕು ಇಬ್ಭಾಗವಾಗಬಾರದು ಎಂಬುದು ನನ್ನ ಆಗ್ರಹವಾಗಿದೆ. ಈ ಹಿಂದೆ ಸಿಎಂ ಕರೆದ ಸಭೆಯಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದೆವು. ಮತ್ತೊಮ್ಮೆ ಸಭೆ ಕರೆದು ಶಾಸಕರ ಅಭಿಪ್ರಾಯ ಪಡೆಯುವುದಾಗಿ ಸಿಎಂ ತಿಳಿಸಿದ್ದರು. ಆದರೀಗ ಏಕಾಏಕಿಯಾಗಿ ವಿಜಯನಗರ ಜಿಲ್ಲೆ ಘೋಷಣೆ ಮಾಡಿದ್ದಾರೆ. ಈ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಶಾಸಕ ನಾಗೇಂದ್ರ ದೂರಿದ್ದಾರೆ.

ಇದನ್ನೂ ಓದಿ...ನವೆಂಬರ್ 26 ಬಳ್ಳಾರಿ ಬಂದ್ ಶಾಂತಿಯುತ, ಬಲವಂತದ ಅಂಗಡಿ-ಮುಂಗಟ್ಟು ಮುಚ್ಚದಿರಲು ನಿರ್ಧಾರ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.