ಹೊಸಪೇಟೆ: ಉಪ ಚುನಾವಣೆಯಲ್ಲಿ ಗೆದ್ದ ದಿನವೇ ವಿಜಯನಗರದ ಶಾಸಕ ಆನಂದ ಸಿಂಗ್ ನಗರದ ದೇವರಿಗೆ 9 ಕೆಜಿ ಬೆಳ್ಳಿಯನ್ನು ನೀಡಿ ಹರಕೆ ಸಮರ್ಪಿಸಿದ್ದಾರೆ.
ನಗರದಲ್ಲಿ ಪಾದಯಾತ್ರೆ ಮಾಡಿ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸದ ಬಳಿಕ ಮಾತನಾಡಿದ ಅವರು, ಹಲವು ದಿನಗಳಿಂದ ಹರಕೆ ಸಮರ್ಪಿಸಬೇಕು ಅಂದುಕೊಂಡಿದ್ದೆ. ನಾನಾ ಕಾರಣಗಳಿಂದ ಅದನ್ನು ಸಮರ್ಪಿಸಲು ಸಾಧ್ಯವಾಗಲಿಲ್ಲ. ಕಮಲದಿಂದ ಮತ್ತೆ ಶಾಸಕನಾದ ಕಾರಣ ದೇವರಿಗೆ ಈ ಹರಕೆಯನ್ನು ಸಮರ್ಪಿಸಿದ್ದೇನೆ ಎಂದರು.
ನಗರದಲ್ಲಿರುವ 5 ದೇವಸ್ಥಾನಗಳಿಗೆ ತಲಾ 9 ಕೆಜಿ ಬೆಳ್ಳಿಯನ್ನು ನೀಡಿದ್ದಾರೆ. ಬಾಣದ ಕೇರಿಯಲ್ಲಿರುವ ನಿಜಲಿಂಗಮ್ಮ ದೇವಸ್ಥಾನ, ಚಿತ್ರಕೇರಿಯ ತಾಯಮ್ಮ ದೇವಿ ಮಂದಿರ, ಉಕ್ಕಡ ಕೇರಿಯ ಹುಲಿಗೆಮ್ಮ ದೇವಿ ಹಾಗೂ ಜಲದುರ್ಗಮ್ಮ ಮ್ಯಾಸನಕೇರಿಯ ಹುಲಿಗೆಮ್ಮ ದೇವರು ಸೇರಿದಂತೆ ಎಲ್ಲ ದೇವಸ್ಥಾನಗಳಿಗೆ ಬೆಳ್ಳಿಯನ್ನು ನೀಡಿ ಶಾಸಕ ಆನಂದ ಸಿಂಗ್ ಅವರು ತಮ್ಮ ಬಹು ದಿನದ ಹರಕೆಯನ್ನು ಸಮರ್ಪಿಸಿದ್ದಾರೆ.