ಹೊಸಪೇಟೆ/ಬಳ್ಳಾರಿ: ನಗರದಲ್ಲಿರುವ ಗೃಹ ಮಂಡಳಿಯ ಪ್ರದೇಶವನ್ನು ಸರಕಾರಿ ಕಚೇರಿಗಗಳ ನಿರ್ಮಾಣಕ್ಕಾಗಿ ನೀಡಲಾಗುತ್ತದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ರು.
ನಗರದ ಗೃಹ ಮಂಡಳಿಯ ಪ್ರದೇಶವನ್ನು ಸಚಿವ ವಿ.ಸೋಮಣ್ಣ , ಅರಣ್ಯ ಸಚಿವ ಆನಂದ ಸಿಂಗ್ ವೀಕ್ಷಣೆ ಮಾಡಿದ್ರು. ಕರ್ನಾಟಕ ಗೃಹ ಮಂಡಳಿಯ ಎಂಜಿನಿಯರ್ ನಂಜುಂಡಪ್ಪ ಮತ್ತು ರಾಜೀವ್ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾದ್ ನಗರದ ಗೃಹ ಮಂಡಳಿಯ ಪ್ರದೇಶ ಬಗ್ಗೆ ಮಾಹಿತಿ ನೀಡಿದ್ರು.
ಬಳಿಕ ಮಾತನಾಡಿದ ಸಚಿವ ವಿ. ಸೋಮಣ್ಣ, ಗೃಹ ಮಂಡಳಿಯ ಪ್ರದೇಶದಲ್ಲಿರುವ ಸ್ಥಳದಲ್ಲಿ ಸಾರ್ವಜನಿಕರಿಗೆ ಮನೆಗಳನ್ನು ನಿರ್ಮಾಣ ಮಾಡುವ ಆಲೋಚನೆಯಿತ್ತು. ಆದರೆ ಸಚಿವ ಆನಂದ ಸಿಂಗ್ ಅವರು ಕಚೇರಿಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದಾರೆ. ಅದಕ್ಕಾಗಿ ಈ ಸ್ಥಳದಲ್ಲಿ ಸರಕಾರಿ ಕಚೇರಿಗಳನ್ನು ನಿರ್ಮಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ಅರಣ್ಯ ಸಚಿವ ಆನಂದ ಸಿಂಗ್ ಈ ಸ್ಥಳವನ್ನು ಸರಕಾರಿ ಇಲಾಖೆ ನಿರ್ಮಿಸಲು ಕೋರಿದ್ದಾರೆ. ಹಾಗಾಗಿ ಇಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಮನೆಗಳನ್ನು ನಿರ್ಮಾಣ ಮಾಡಲು ಅವಕಾಶ ನೀಡಲಾಗುವುದಿಲ್ಲ. ಸಾರ್ವಜನಿಕರು ನೀಡಿರುವ ಹಣಕ್ಕೆ ಬಡ್ಡಿ ಸೇರಿಸಿ ಮರು ಪಾವತಿ ಮಾಡಲಾಗುತ್ತದೆ ಎಂದು ಅವರು ಭರವಸೆಯನ್ನು ನೀಡಿದರು.