ETV Bharat / state

ಎನ್​ಎಂಡಿಸಿ ಕಂಪನಿ ನೇಮಕಾತಿ ವಿವಾದ: ಸಚಿವ ಶ್ರೀರಾಮುಲು ಹೇಳಿದ್ದೇನು?

ಕೇಂದ್ರ ಸರ್ಕಾರ ಸ್ವಾಮ್ಯದ ಎನ್​ಎಂಡಿಸಿ ಕಂಪನಿ ಒಂದಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿರುತ್ತದೆ. ಮೊದಲಿನಿಂದಲೂ ಸ್ಥಳೀಯರಿಗಿಂತ ಹೊರ ರಾಜ್ಯದವರನ್ನು ಕಂಪನಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ. ಈಗ ಮತ್ತೊಮ್ಮೆ ಇಂತಹ ಆರೋಪ ಎನ್​ಎಂಡಿಸಿ ವಿರುದ್ಧ ಕೇಳಿ ಬಂದಿವೆ.

Minister Sriramulu
ಸಚಿವ ಶ್ರೀರಾಮುಲು
author img

By

Published : Aug 10, 2022, 5:21 PM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್​ಎಂಡಿಸಿ ಗಣಿ ಕಂಪನಿ 200 ಹುದ್ದೆಗಳಿಗಾಗಿ ಪರೀಕ್ಷೆ ನಡೆಸಿದೆ. ಒಟ್ಟು 53 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ರು. ಈಗಾಗಲೇ ಪರೀಕ್ಷೆ ಮುಗಿದು, 200 ಅಭ್ಯರ್ಥಿಗಳ ಆಯ್ಕೆ ಸಹ ಮಾಡಲಾಗಿದೆ. ಆದರೆ ಪರೀಕ್ಷೆ ಹಾಗೂ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಸ್ಥಳೀಯರಿಗೆ ಹೆಚ್ಚು ಆದ್ಯತೆ ನೀಡದೇ ಹೊರ ರಾಜ್ಯದವರೆಗೆ ಮಣೆ ಹಾಕಲಾಗಿದೆ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್ ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಆಗಿರುವುದನ್ನ ಯಾವುದೇ ಕಾರಣಕ್ಕೂ ರದ್ದು ಪಡಿಸಬಾರದು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಅವರು ಪ್ರತಿಕ್ರಿಯಿಸಿದ್ದು, ಸ್ಥಳೀಯರಿಗೆ ಹೆಚ್ಚು ಆದ್ಯತೆ ನೀಡುವ ಸಂಬಂಧ ಈಗಾಗಲೇ ಕೇಂದ್ರ ಸಚಿವರೊಂದಿಗೆ ಮಾತನಾಡಲಾಗಿದೆ. 200 ಹುದ್ದೆಗಳ ಪೈಕಿ ಕರ್ನಾಟಕದಿಂದ 153 ಅಭ್ಯರ್ಥಿಗಳು ಆಯ್ಕೆಯಾಗಿದ್ರೆ, ಸಂಡೂರು ತಾಲೂಕಿನಲ್ಲೇ 63 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಓಎಂಸಿ ಗಣಿ ಆರಂಭಕ್ಕೆ ತಕರಾರು ಇಲ್ಲ ಎಂದ ಆಂಧ್ರ ಸರ್ಕಾರ: ರೆಡ್ಡಿ ಸಹೋದರರಲ್ಲಿ ಆಶಾಭಾವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.