ಬಳ್ಳಾರಿ: ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಮುಂಡರಗಿ ಪ್ರದೇಶ ವ್ಯಾಪ್ತಿಯಲ್ಲಿಂದು ವಸತಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಇಬ್ರಾಹಿಂ ಯಾವತ್ತಾದ್ರೂ ನಿಜ ಹೇಳಿದ್ದಾರೇನ್ರಿ? ಅವರು ಯಾವತ್ತಾದ್ರೂ ಒಳ್ಳೆಯದನ್ನು ಮಾಡಿದ್ದಾರೇನ್ರಿ? ನಮ್ಮೊಂದಿಗೆ ಅವರೂ ಕೂಡ ಇದ್ದರು. ಮೊದ್ಲು ನಶೆ ಪುಡಿ ತಿಕ್ಕುತ್ತಿದ್ದರು. ಈಗ ವಯಸ್ಸಾಗಿದೆ ಅಲ್ವಾ, ನಶೆ ಬಿಟ್ಟಿರಬಹುದು. ಅದ್ಕೆ ಪಿತ್ತ ನೆತ್ತಿಗೇರಿರಬಹುದು ಎಂದು ಛೇಡಿಸಿದ್ರು.
ಇಬ್ರಾಹಿಂ ಅವರು ಹಾಕುವ ನಶೆಪುಡಿಯ ಘಮಲು ಜಾಸ್ತಿಯಾಗಿ ಬಿಜೆಪಿ ಶಾಸಕರ ರಾಜೀನಾಮೆ ವಿಚಾರದ ಪ್ರಸ್ತಾಪ ಮಾಡಿದ್ದಾರೆ. 40 ವರ್ಷದಿಂದ ಅವರನ್ನು ನಾನು ನೋಡಿರುವೆ. ಅವ್ರು ಯಾವತ್ತಾದ್ರೂ ನಿಜ ಹೇಳಿದ್ದಾರಾ? ಎಂದು ವ್ಯಂಗ್ಯವಾಡಿದ್ರು.