ಬಳ್ಳಾರಿ : ಭಗೀರಥ ಜಯಂತಿ ಆಚರಣೆ ವೇಳೆ ಸಚಿವ ಶ್ರೀರಾಮುಲು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ನಗರದ ಮುನಿಸಿಪಲ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಶ್ರೀ ಭಗೀರಥ ಜಯಂತ್ಯುತ್ಸವ ಅಂಗವಾಗಿ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಲು ಬಂದಿದ್ದ ಸಚಿವ ಶ್ರೀರಾಮುಲು, ಕಳೆಗುಂದಿದ ಫೋಟೋ ಹಾಗೂ ಜಯಂತಿಗೆ ಜನರನ್ನು ಸೇರಿಸಿಲ್ಲ ಎಂದು ಕೊರಳಿಗೆ ಹಾಕಿದ್ದ ಹೂವಿನ ಹಾರ ಎಸೆದು ಅಧಿಕಾರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು. ಎಡಿಸಿ ಮಂಜುನಾಥ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗಪ್ಪ ರಂಗಣ್ಣನವರ್ಗೆ ಶ್ರೀರಾಮುಲು ಕ್ಲಾಸ್ ತೆಗೆದುಕೊಂಡರು.
ಕಾಮನ್ ಸೆನ್ಸ್ ಇಲ್ಲವೇನ್ರಿ ನಿಮ್ಗೇ, ಕಾಟಾಚಾರಕ್ಕೆ ಯಾಕೆ ಕೆಲಸ ಮಾಡ್ತೀರಾ? ಬೇಕಾಬಿಟ್ಟಿ ಮಾಡುವ ಕಾರ್ಯಕ್ರಮಗಳಿಗೆ ನಾನು ಬರಲ್ಲ. ಇಂತಹ ವಿಚಾರದಲ್ಲಿ ರಾಜಿಯಾಗೋದೇ ಇಲ್ಲ ಎಂದು ತರಾಟೆ ತೆಗೆದುಕೊಂಡರು. ನಿಮ್ಮ ಸಮಜಾಯಿಷಿಗಳನ್ನ ಸಣ್ಣ ಹುಡುಗರಿಗೆ ಹೇಳಿ, ನನಗೆ ಹೇಳಬೇಡಿ ಎಂದರು.
ಇದನ್ನೂ ಓದಿ: 19 ಲಕ್ಷ ಇವಿಎಂ ನಾಪತ್ತೆ ಪ್ರಕರಣ ತನಿಖೆ ಸುಪ್ರೀಂ ಕೋರ್ಟ್ ಮೂಲಕ ನಡೆಯಲಿ: ಹೆಚ್ ಕೆ ಪಾಟೀಲ್