ETV Bharat / state

ಬಳ್ಳಾರಿ ಡೆಂಟಲ್ ಕಾಲೇಜಿಗೆ ಸಚಿವ ಆನಂದ್ ಸಿಂಗ್ ಭೇಟಿ: ಸೋಂಕಿತರ ಆರೋಗ್ಯ ವಿಚಾರಣೆ - ಡೆಂಟಲ್ ಕಾಲೇಜಿಗೆ ಭೇಟಿ ನೀಡಿದ ಸಚಿವ ಆನಂದಸಿಂಗ್

ಬಳ್ಳಾರಿ ಡೆಂಟಲ್ ಕಾಲೇಜಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್ ಭೇಟಿ ನೀಡಿದ್ದಾರೆ.

Minister Anandasingh visited dental college
ಬಳ್ಳಾರಿ ಡೆಂಟಲ್ ಕಾಲೇಜಿಗೆ ಸಚಿವ ಆನಂದಸಿಂಗ್ ಭೇಟಿ
author img

By

Published : Jul 8, 2020, 2:09 PM IST

ಬಳ್ಳಾರಿ: ನಗರದ ಕೊಳಗಲ್ಲು ರಸ್ತೆಯಲ್ಲಿರುವ ಸರ್ಕಾರಿ ಡೆಂಟಲ್ ಕಾಲೇಜ್​ಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಭೇಟಿ ನೀಡಿ, ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿದರು.

ಬಳ್ಳಾರಿ ಡೆಂಟಲ್ ಕಾಲೇಜಿಗೆ ಭೇಟಿ ನೀಡಿದ ಸಚಿವ ಆನಂದ್ ಸಿಂಗ್

ಸರ್ಕಾರಿ ಡೆಂಟಲ್ ಕಾಲೇಜಿಗೆ ಭೇಟಿ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಡೀ ರಾಜ್ಯಕ್ಕೆ ಸೋಂಕಿತರ ಆರೋಗ್ಯ ವಿಚಾರಣೆ ಮಾದರಿಯಾಗಬೇಕು. ಜಿಲ್ಲೆಯಲ್ಲಿ ಯಾವ ರೀತಿಯಾಗಿ ಕೊರೊನಾ ಸೋಂಕಿತರನ್ನು ಆರೈಕೆ ಮಾಡಲಿದ್ದಾರೆ ಎಂಬುದನ್ನು ಕೂಡ ರಾಜ್ಯದ ಜನರಿಗೆ ತಿಳಿಯಬೇಕೆಂಬ ಉದ್ದೇಶಕ್ಕಾಗಿ ಭೇಟಿ ನೀಡುತ್ತಿರುವೆ ಎಂದರು.

ಡೆಂಟಲ್ ಕಾಲೇಜಿನಲ್ಲಿರುವ ಐಸೊಲೇಷನ್ ವಾರ್ಡ್​ಗೆ ನಾನು, ವಿಮ್ಸ್ ಡೈರೆಕ್ಟರ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಸೇರಿದಂತೆ ಮೂರು ಮಂದಿ ಮಾತ್ರ ಒಳಗಡೆ ಪ್ರವೇಶಿಸಲು ಅವಕಾಶ ಕಲ್ಪಿಸಿದ್ದು, ಕೇವಲ 15 ನಿಮಿಷಗಳ ಕಾಲಾವಕಾಶವನ್ನು ನೀಡಿದ್ದಾರೆ. ಅದರೊಳಗೆ ಸೋಂಕಿತರ ಆರೋಗ್ಯವನ್ನ ವಿಚಾರಿಸುವೆ ಎಂದರು.

ಈ ಸಂದರ್ಭ ಜಿಲ್ಲಾಧಿಕಾರಿ ನಕುಲ್, ಎಡಿಸಿ ಮಂಜುನಾಥ, ಎಸಿ ರಮೇಶ ಕೋನರೆಡ್ಡಿ, ಸಚಿವರ ಆಪ್ತರಾದ ಮುನ್ನಾ ಸಿಂಗ್ ಸೇರಿದಂತೆ ಇತರರು ಜೊತೆಯಲ್ಲಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.