ETV Bharat / state

ಕೋವಿಡ್ 19 ತಡೆಯಲು ಸಾರ್ವಜನಿಕರು ಮನೆಯಲ್ಲಿರಬೇಕು : ಸಚಿವ ಆನಂದ ಸಿಂಗ್ - ದೇಶದಲ್ಲಿ ಕೋವಿಡ್-19 ಪ್ರಕರಣ

ದೇಶದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರಿಂದ ತಪ್ಪಿಸಿಕೊಳ್ಳಲು ಎಲ್ಲರೂ 21 ದಿನಗಳ ಕಾಲ ಮನೆಯಲ್ಲಿ ಇರಲೇಬೇಕು ಇಲ್ಲವಾದರೆ ತುಂಬ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇದನ್ನು ಪ್ರತಿಯೊಬ್ಬ ನಾಗರಿಕರು ಅರ್ಥ ಮಾಡಿಕೊಳ್ಳಬೇಕೆಂದು ಅರಣ್ಯ ಸಚಿವ ಆನಂದ ಸಿಂಗ್ ಮನವಿ ಮಾಡಿದರು.

Minister Anand Singh
ಕೋವಿಡ್ 19 ತಡೆಯಲು ಸಾರ್ವಜನಿಕರು ಮನೆಯಲ್ಲಿರಬೇಕು : ಸಚಿವ ಆನಂದ ಸಿಂಗ್
author img

By

Published : Mar 27, 2020, 9:52 AM IST

ಹೊಸಪೇಟೆ: ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಸಿಗುತ್ತಿಲ್ಲ, ಸರ್ಕಾರ ಇಡೀ ದೇಶವನ್ನು ಲಾಕ್‌ಡೌನ್ ಮಾಡಿದ್ದರೂ ಸಾರ್ವಜನಿಕರು ಮಾತ್ರ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ. ಅಧಿಕಾರಿಗಳು ಎಷ್ಟು ಹೇಳಿದರೂ ಜನರು ಮಾತ್ರ ಕೇಳುತ್ತಿಲ್ಲ. ರಸ್ತೆಯಲ್ಲಿ ತಿರುಗಾಡುವ ಜನರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅರಣ್ಯ ಸಚಿವ ಆನಂದ ಸಿಂಗ್ ತಿಳಿಸಿದರು.

ಕೋವಿಡ್ 19 ತಡೆಯಲು ಸಾರ್ವಜನಿಕರು ಮನೆಯಲ್ಲಿರಬೇಕು : ಸಚಿವ ಆನಂದ ಸಿಂಗ್

ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿರುವ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ತಾಲೂಕಿನ ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ದೇಶದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರಿಂದ ತಪ್ಪಿಸಿಕೊಳ್ಳಲು ಎಲ್ಲರೂ 21 ದಿನಗಳ ಕಾಲ ಮನೆಯಲ್ಲಿ ಇರಲೇಬೇಕು ಇಲ್ಲವಾದರೆ ತುಂಬ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇದನ್ನು ಪ್ರತಿಯೊಬ್ಬ ನಾಗರಿಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ಭಾರತ ಲಾಕ್ ಡೌನ್​ಗೆ ಇನ್ನು 18 ದಿನಗಳ ಕಾಲ ಮನೆಯಲ್ಲಿರಿಬೇಕು. ಇಲ್ಲವಾದಲ್ಲಿ ಪೊಲೀಸರು, ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಎಚ್ಚರಿಕೆಯನ್ನು ನೀಡಿದರು. ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಅದು ಬರುವುದು ಬೇಡ. ಕೊರೊನಾ ವೈರಸ್ ಹತೋಟಿಗಾಗಿ ಉಳಿದಿರುವುದು ಒಂದೇ ಮಾರ್ಗ ಎಲ್ಲರೂ ಮನೆಯಲ್ಲಿ ಇರುವುದು. ಹಾಗಾಗಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ, ನಗರಸಭೆ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸವನ್ನು ಮಾಡುತ್ತಿದ್ದಾರೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.