ETV Bharat / state

ಗಾಜಿನ ಮನೆ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಿ: ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್... - Hospet minister Anand Singh

ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಹೊಸಪೇಟೆಯಲ್ಲಿ ಗಾಜಿನ ಮನೆ ನಿರ್ಮಿಸಬೇಕು. ಇದೊಂದು ಪ್ರವಾಸಿ ತಾಣವಾಗಬೇಕು. ಅಲ್ಲದೇ, ಉದ್ಯಾನವನ ನಿರ್ಮಾಣಕ್ಕೂ ತಯಾರಿ ನಡೆಸಬೇಕು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.

author img

By

Published : Oct 1, 2020, 10:17 PM IST

ಹೊಸಪೇಟೆ: ನಗರದ ಹುಡಾ ಕಚೇರಿಯ ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದಲ್ಲಿಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರ ನೇತೃತ್ವದಲ್ಲಿ ಜಿಲ್ಲಾ ಖನಿಜ ನಿಧಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಪ್ರವಾಸೋದ್ಯಮ ಉತ್ತೇಜನಕ್ಕಾಗಿ ನಗರದಲ್ಲಿ ಗಾಜಿನ ಮನೆ ನಿರ್ಮಿಸಬೇಕು. ಇದೊಂದು ಪ್ರವಾಸಿ ತಾಣವಾಗಬೇಕು. ತೋಟಗಾರಿಕೆ ಇಲಾಖೆ ಅವರು ಸ್ಥಳ ಪರಿಶೀಲನೆ ನಡೆಸಿ,ರೂಪುರೇಷೆಗಳನ್ನು ಸಿದ್ಧಪಡಿಸಬೇಕು. ಅಲ್ಲದೇ, ಉದ್ಯಾನವನ ನಿರ್ಮಾಣಕ್ಕೂ ತಯಾರಿ ನಡೆಸಬೇಕು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಎಂದರು. ಗಾಜಿನ ಮನೆ ಮೂಲಕ ನಗರವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು.‌ ಪ್ರವಾಸಿಗರನ್ನು ಸೆಳೆಯುವಂತ ವಾತಾವರಣವನ್ನು ನಿರ್ಮಿಸುವುದರಿಂದ ನಗರಕ್ಕೆ ಮತ್ತಷ್ಟು ಮೆರಗು ಬರಲಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರ ನೇತೃತ್ವದಲ್ಲಿ ಜಿಲ್ಲಾ ಖನಿಜ ನಿಧಿ ಪ್ರಗತಿ ಪರಿಶೀಲನಾ ಸಭೆ

ತಾಲೂಕಿನ ಶಾಲಾ ಕಟ್ಟಡ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಒಟ್ಟು ಕಾಮಗಾರಿಗಳು ಎಷ್ಟು ಇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುನಾಂದ ಅವರಿಂದ ಮಾತಿಯನ್ನು ಪಡೆದುಕೊಂಡರು. ಬಳಿಕ ನಾನಾ ಇಲಾಖೆಗಳಿಂದ ಪ್ರಗತಿಯ ಮಾಹಿತಿಯನ್ನು ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತೆ ಜಯಲಕ್ಷ್ಮೀ, ಶಿಶು ಅಭಿವೃದ್ಧಿ ಅಧಿಕಾರಿ ಅಮರೇಶ್, ತಾಲೂಕು ವೈದ್ಯಾಧಿಕಾರಿ ಡಾ.ಡಿ.ಭಾಸ್ಕರ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕಿಶೋರ ಕುಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.