ಬಳ್ಳಾರಿ : ಮೇ 30 ರಂದು ತುಂಗಭದ್ರಾ ಜಲಾಶಯದ ಹೂಳು ಎತ್ತುವ ಜಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ, ತುಂಗಭದ್ರಾ ಜಲಾಶಯ ನಿರ್ಮಾಣವಾಗಿ 75 ವರ್ಷ ಪೂರ್ಣಗೊಂಡಿದೆ. ಇಂದು ಮೂರು ರಾಜ್ಯಗಳು ಸೇರಿ ಏಳು ಜಿಲ್ಲೆಗಳಿಗೆ ತುಂಗಭದ್ರಾ ಜಲಾಶಯ ನೀರು ನೀಡುತ್ತಿದೆ. ಅದ್ರೆ ಜಲಾಶಯದಲ್ಲಿ 37 ಟಿಎಂಸಿ ಹೂಳು ತುಂಬಿದ್ದು ಸರ್ಕಾರ ಹೂಳೆತ್ತುವ ಕಾರ್ಯ ಮಾಡಿಲ್ಲ ಎಂದು ದೂರಿದರು.
12 ಲಕ್ಷ ಎಕರೆ ಭೂಮಿಗೆ ನೀರನ್ನು ಒದಗಿಸುವ ಜಲಾಶಯದಲ್ಲಿ ಹೂಳು ತುಂಬಿದ್ದು, ನೀರಿನ ಅಭಾವ ಉಂಟಾಗಿದೆ. ವರ್ಷಕ್ಕೆ ಎರಡು ಬೆಳೆಯನ್ನು ನೀಡುವ ಜಲಾಶಯ ಇಂದು ಒಂದು ಬೆಳೆಯನ್ನೂ ನೀಡದ ಸ್ಥಿತಿಯಲ್ಲಿದೆ ಎಂದರು.
ನಿರಂತರ ಹೋರಾಟ
ಕಳೆದ ಎಂಟು ವರ್ಷದಿಂದ ನಿರಂತರವಾಗಿ ತುಂಗಭದ್ರಾ ಜಲಾಶಯದಲ್ಲಿನ ಹೂಳನ್ನು ತೆಗೆಯುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ತುಂಗಭದ್ರಾ ರೈತ ಸಂಘ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದ್ರೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದರು. ಸರ್ಕಾರಗಳ ಗಮನಕ್ಕೆ ಬರಬೇಕೆಂದು, ಮೇ 30 ರಂದು ಹೂಳು ತೆಗೆಯುವ ಕೆಲಸ ಪ್ರಾರಂಭಿಸುತ್ತಿದ್ದು, 25 ಟ್ರ್ಯಾಕ್ಟರ್ ಮತ್ತು ಎರಡು ಜೆಸಿಬಿ ಮೂಲಕ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗುತ್ತಿದ್ದೆವೆ ದರೂರು ಪುರುಷೋತ್ತಮ ಗೌಡ ತಿಳಿಸಿದರು.
ಸಹಾಯದ ಅವಶ್ಯಕತೆ
ಸಾರ್ವಜನಿಕರು ತುಂಗಭದ್ರಾ ಜಲಾಶಯ ಹೂಳು ಎತ್ತುವುದಕ್ಕೆ ಹಣಕಾಸಿನ ಸಹಾಯಕ ನೀಡಿ ಎಂದು ರೈತ ಸಂಘ ಕೇಳಿಕೊಂಡರು. ಬ್ಯಾಂಕ್ ಹೆಸರು: ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್. ಖಾತೆ ಸಂಖ್ಯೆ : 10605101067783. ಶಾಖೆ : ವಾಯು ಪುತ್ರ ಕಾಲೋನಿ, ಎಸ್.ಎನ್.ಪೇಟ್,