ETV Bharat / state

ಬಳ್ಳಾರಿ: ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಬೃಹತ್ ಪ್ರತಿಭಟನೆ

ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಬಳ್ಳಾರಿ ನಗರದಲ್ಲಿಂದು ಪ್ರತಿಭಟನೆ ನಡೆಯಿತು.

massive-protest-against-arrest-of-chandrababu-naidu-in-bellari
ಬಳ್ಳಾರಿ: ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಬೃಹತ್ ಪ್ರತಿಭಟನೆ
author img

By ETV Bharat Karnataka Team

Published : Sep 17, 2023, 4:35 PM IST

ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ

ಬಳ್ಳಾರಿ: ಆಂಧ್ರಪ್ರದೇಶ ಮಾಜಿ ಸಿಎಂ ಹಾಗೂ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ನಗರದಲ್ಲಿಂದು ಪ್ರತಿಭಟನೆ ನಡೆಸಿಯಿತು. ನಗರದ ದುರ್ಗಮ್ಮ ದೇವಾಲಯದಿಂದ ಡಿಸಿ ಕಚೇರಿವರೆಗೆ ನಡೆದ ಬೃಹತ್ ಮೆರವಣಿಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ಚಂದ್ರಬಾಬು ನಾಯ್ಡುಗೆ ಬೆಂಬಲ ಸೂಚಿಸಿದರು. ಆಂಧ್ರಪ್ರದೇಶದ ಆಡಳಿತರೂಢ ವೈಎಸ್​ಆರ್​ಪಿಸಿ ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರತಿಭಟನಾಕಾರರು, ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಿಬಿಎನ್ ಸಂಘದ ಸದಸ್ಯ ಕುಡತಿನಿ ರಾಮು ಮಾತನಾಡಿ, ದೂರದೃಷ್ಟಿವುಳ್ಳ ನಾಯಕ, ಅಭಿವೃದ್ಧಿಯ ಸ್ಪಷ್ಟ ಕಲ್ಪನೆ ಹೊಂದಿರುವ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿರುವುದು ಖಂಡನೀಯ. ಅವರ ಮೇಲೆ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು‌ ದ್ವೇಷದ ರಾಜಕಾರಣದಿಂದ ಬಂಧಿಸಿದ್ದಾರೆ. ಇಡಿ, ಸಿಬಿಐ ಮುಂತಾದ ಕೇಸ್​ಗಳನ್ನು ಹೊಂದಿರುವ ಸಿಎಂ ಜಗನ್ ಅವರು ಮುಂದಿನ‌ ಚುನಾವಣೆ ಹಿನ್ನೆಲೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಕೇಸ್‌‌ ದಾಖಲಿಸಿ, ಬಂಧಿಸಿರುವುದು ಸರಿಯಲ್ಲ ಎಂದು ತಿಳಿಸಿದರು.

ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸಿ.ಶ್ರೀನಿವಾಸ್ ರಾವ್ ಮಾತನಾಡಿ, ಗುಜರಾತ್ ಮಾದರಿಯಿಂದಾಗಿ ಮೋದಿ ಪ್ರಧಾನಿ ಆಗಿದ್ದಾರೆ. ಅದೇ ರೀತಿ ಕನಸು ಕಂಡಿದ್ದ ಚಂದ್ರಬಾಬು ನಾಯ್ಡು ಅವರ ವಿರುದ್ಧ ಇಲ್ಲಸಲ್ಲದ ಕೇಸ್​ಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ನಾಯ್ಡು ಅವರು ಹೈದರಾಬಾದ್ ಅನ್ನು ಐಟಿಬಿಟಿ ಹಬ್ ಆಗಿ ನಿರ್ಮಿಸುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ. ಅನೇಕ ಯುವ ಜನರಿಗೆ ಉದ್ಯೋಗ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಅಂತಹ ನಾಯಕನನ್ನು ಬಂಧಿಸಿರುವುದು ಖಂಡನೀಯ ಎಂದರು.

ಬಿಲ್ ಗೇಟ್ಸ್ ಅಂತಹ ಮಾಹನ್ ವ್ಯಕ್ತಿಗಳು ಹೈದರಾಬಾದ್​ಗೆ ಬಂದು ಅಲ್ಲಿನ ಐಟಿಬಿಟಿ ಕಂಪನಿಗಳನ್ನು ಕಂಡು ನಾಯ್ಡು ಅವರನ್ನು ಬಹಿರಂಗವಾಗಿಯೇ ಹೊಗಳಿದ್ದರು. ಅಂತಹ ವ್ಯಕ್ತಿಯ ಮೇಲೆ ಆರೋಪ ಮಾಡಿ ಜೈಲಿಗೆ ಕಳುಹಿಸಿರುವ ದ್ವೇಷದ ರಾಜಕಾರಣವನ್ನು ಜಗನ್ ಕೈ ಬಿಡಬೇಕು. ಮುಂದಿನ ಚುನಾವಣೆಯಲ್ಲಿ ಆಂಧ್ರದ ಜನರು ಅವರಿಗೆ ಸರಿಯಾದ ಬುದ್ಧಿ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುರ್ರಂ ಲಾಲ್ ಮೋಹನ್, ಕೋನಂಕಿ ರಾಮಪ್ಪ, ಕುಡತಿನಿ ಶ್ರೀನಿವಾಸ್, ದಾಮೋದರ್, ವಿಷ್ಣು, ವಿಕ್ಕಿ, ಈಶ್ವರಯ್ಯ, ರಜನಿ, ರಮಪ್ರಭ, ರಾಮಬ್ರಹ್ಮ, ಶ್ರೀನಿವಾಸ್ ರಾವ್, ಕೊನಂಕಿ ತಿಲಕ್, ರಾಮಾಂಜನೇಯಲು, ಅಲವೇಲು ಸುರೇಶ್, ಅಮರನಾಥ ಚೌಧರಿ ಸೇರಿದಂತೆ ಸಿಬಿಎನ್ ಅಭಿಮಾನಿಗಳ ಸಂಘ, ಬಳ್ಳಾರಿ ತೆಲುಗು ಸಂಘ, ಎನ್​ಟಿಆರ್ ಅಭಿಮಾನಿಗಳ ಸಂಘ, ನಂದಮೂರಿ ಅಭಿಮಾನಿಗಳ ಸಂಘ, ಪವನ್ ಕಲ್ಯಾಣ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ಇದ್ದರು.

ಇದನ್ನೂ ಓದಿ: ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಐಟಿ ಉದ್ಯೋಗಿಗಳಿಂದ ಬೃಹತ್​ ಕಾರು ರ್ಯಾಲಿ.. 9 ಮಂದಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.