ETV Bharat / state

ಬಳ್ಳಾರಿಯಲ್ಲಿ ದೇವರನ್ನು ಒಲಿಸಿಕೊಳ್ಳಲು ದುಸ್ಸಾಹಸ.. ನಾಲಿಗೆಯನ್ನೇ ಕತ್ತರಿಸಿ ಅರ್ಪಿಸಿದ ಭಕ್ತ! - ವಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದಾನೆ

ದೇವರಿಗೆ ನಾಲಿಗೆ ಅರ್ಪಣೆ ಮಾಡಿದ ಯುವಕ - ಪರಮಾತ್ಮ ಒಲಿಯುತ್ತಾನೆ ಎಂಬ ನಂಬಿಕೆ - ತುಂಡಾದ ನಾಲಿಗೆ ಸಮೇತ ಆಸ್ಪತ್ರೆಗೆ ದಾಖಲು.

man dedicated his tongue to God in Bellary
ಬಳ್ಳಾರಿಯಲ್ಲಿ ದೇವರಿಗೆ ನಾಲಿಗೆ ಅರ್ಪಿಸಿದ ಭೂಪ
author img

By

Published : Jan 29, 2023, 4:50 PM IST

Updated : Jan 29, 2023, 5:35 PM IST

ಬಳ್ಳಾರಿ: ಯುವಕನೋರ್ವ ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದ ವಿಚಿತ್ರ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ‌ ಉಪ್ಪಾರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಉಪ್ಪಾರ ಹೊಸಹಳ್ಳಿ ಗ್ರಾಮದ 24 ವರ್ಷದ ಅಗಸರ ವೀರೇಶ್ ಎಂಬಾತನೇ ನಾಲಿಗೆ ಕತ್ತರಿಸಿಕೊಂಡಿರುವ ಯುವಕ.

ಶಂಕರಪ್ಪ ತಾತನ ಮೇಲೆ ಯುವಕ ನಂಬಿಕೆ ಇಟ್ಟುಕೊಂಡಿದ್ದನಂತೆ. ಆದರೆ ನಾಲಿಗೆ ಕತ್ತರಿಸಿಕೊಂಡ ವೇಳೆ ಕುಡಿದ ಅಮಲಿನಲ್ಲಿದ್ದು, ಯುವಕ ಈ ರೀತಿ ಮಾಡಿಕೊಂಡಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆತ ಮಾನಸಿಕ ಖಿನ್ನತೆಯಲ್ಲಿ ಇದ್ದ ಎಂದು ಸಹ ಹೇಳಲಾಗುತ್ತಿದೆ. ದೇವರನ್ನು ಒಲಿಸಿಕೊಳ್ಳುವ ಮೌಢ್ಯತೆಯಲ್ಲಿ ಯುವಕ ನಾಲಿಗೆ ಕತ್ತರಿಸಿಕೊಂಡಿದ್ದಾನೆ.

ಬಳಿಕ ಯುವಕ ಕಟ್​ ಆಗಿರುವ ನಾಲಿಗೆಯ ಸಮೇತ ವಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಾನಸಿಕ ಖಿನ್ನತೆಯಲ್ಲಿದ್ದವ ದೇವರು ನಾಲಿಗೆ ಕೇಳಿದ ಅಂತಾ ಚಾಕುವಿನಿಂದ ನಾಲಿಗೆ ಕತ್ತರಿಸಿಕೊಂಡಿರುವ ಬಗ್ಗೆ ಹಲವು ಸಂಶಯಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ಮಂಡ್ಯ: ಜಾಯಿಂಟ್ ವೀಲರ್​​​ಗೆ ತಲೆಕೂದಲು ಸಿಲುಕಿ ಬಾಲಕಿಗೆ ಗಂಭೀರ ಗಾಯ

Last Updated : Jan 29, 2023, 5:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.