ಹೊಸಪೇಟೆ (ವಿಜಯನಗರ): ವಿದ್ಯುತ್ ಸಂಪರ್ಕ ಪಡೆಯುವ ವೇಳೆ ಶಾಕ್ ತಗುಲಿ ವ್ಯಕ್ತಿಯೋರ್ವ ಸಾವನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಸದಾನಂದಯ್ಯ (48) ಎಂದು ಗುರುತಿಸಲಾಗಿದೆ. ಮಾಹಿತಿ ಪಡೆದ ಬೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ಕಂಬದಲ್ಲಿದ್ದ ವ್ಯಕ್ತಿಯ ಶವ ಕೆಳಗಿಳಿಸಿದ್ದಾರೆ.
ವಿದ್ಯುತ್ ಸಂಪರ್ಕ ಪಡೆಯಲು ಜೆಸ್ಕಾಂ ಸಿಬ್ಬಂದಿಯನ್ನು ಸಂಪರ್ಕಿಸಬೇಕಿತ್ತು. ಆದರೆ ಸ್ಥಳೀಯ ವ್ಯಕ್ತಿಯೇ ಕಂಬ ಹತ್ತಿರುವ ಬಗ್ಗೆ ಪ್ರಶ್ನೆ ಮೂಡಿವೆ.