ಬಳ್ಳಾರಿ: ಮಳೆಗಾಗಿ ಪ್ರಾರ್ಥಿಸಿ ನಗರದ ಡಾ.ರಾಜ್ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಮಹಾ ವರುಣ ಯಾಗ ನಡೆಯಿತು.
ನಗರ ಶಾಸಕ ಜಿ.ಸೋಮಶೇಖರರೆಡ್ಡಿಯವರು ಮಹಾ ವರುಣಯಾಗದಲ್ಲಿ ಪಾಲ್ಗೊಂಡು ವಿಶೇಷಪೂಜೆ ಸಲ್ಲಿಸಿದರು. ವೆಂಕಟ ವರದಾಚಾರ್ಯ ಸೇವಾ ಸಮಿತಿ, ಶಬರಿ ಅಯ್ಯಪ್ಪಸ್ವಾಮಿ ಸೇವಾಟ್ರಸ್ಟ್ ಸಹಯೋಗದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಮಹಾವರುಣ ಯಾಗದಲ್ಲಿ ಮಹಾನ್ಯಾಸಪೂರ್ವಕ ಲಘು ರುದ್ರಾಭಿಷೇಕ, ಋಷ್ಯಶೃಂಗಮುನಿ ಅಭಿಷೇಕ ರುದ್ರ ಹವನ, ಮೂಲ ಮಂತ್ರ ಹವನಗಳು, ಅರುಣಹವನ, ಪೂರ್ಣಾಹುತಿ ಸೇರಿದಂತೆ ಧಾರ್ಮಿಕ ಕೈಂಕರ್ಯಗಳು ನಡೆದವು.
ಮಹಾ ವರುಣ ಯಾಗದ ನೇತೃತ್ವವನ್ನು ಗುಂಡು ವೇಣುಗೋಪಾಲ ಶಾಸ್ತ್ರಿ ಬೆಲ್ಹೋನ ವಹಿಸಿದ್ದಾರೆ. ಮಹಾನ್ಯಾಸ ಪೂರ್ವಕ ಲಘುರು ದ್ರಾಭಿಷೇಕ, ದೀಕ್ಷಾ, ಹೋಮ, ರುದ್ರ, ಚಂಡೀಹವನ, ವೇದ ಪಾರಾ ಯಣ, ಮೂಲಮಂತ್ರ ಜಪ, ಸಹಸ್ರ ಘಟಷೋಡಶೋಪಚಾರ ಪೂಜೆ, ವಿರಾಟಪೂರ್ವ ಸುಂದರಕಾಂಡ, ಭಾಗವತದಲ್ಲಿನ ಗಂಗಾ ವತಾರ ಪಾರಾಯಣಗಳು, ಅರುಣ ಪಾರಾಯಣ, ಗಿರಿಜಾ ಕಲ್ಯಾಣ, ದೀಕ್ಷಾ ಹೋಮ, ವೇದಪಾರಾಯಣ, ರುದ್ರಕ್ರಮಾರ್ಚನೆ, ಲಲಿತ ಸಹಸ್ರನಾಮಾರ್ಚನೆ, ಮೂಲಮಂತ್ರ ಜಪ ನಡೆಯಿತು. ಸತತ ಮೂರು ದಿನಗಳಕಾಲ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮವು ಈ ದಿನ ಸಮಾಪ್ತಿಗೊಂಡಿತು. ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು.