ಹೊಸಪೇಟೆ(ವಿಜಯನಗರ): ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕುಮಾರನಹಳ್ಳಿ ಗ್ರಾಮದ ಹೊರವಲಯದಲ್ಲಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದ್ದು, ಕುರಿಗಾಹಿಗೆ ಗಾಯವಾಗಿದೆ.
ಮಂಜುನಾಥ ಗಾಯಗೊಂಡ ಕುರಿಗಾಹಿ. ಕುರಿ ಮೇಯಿಸುತ್ತಿದ್ದಾಗ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿ ಮಾಡುವಾಗ ಕುರಿಗಾಹಿ ಚೀರಾಟ ಕೇಳಿ ಸುತ್ತಮುತ್ತಲಿನ ಜನರು ಕೇಕೆ ಹಾಕಿದಾಗ ಚಿರತೆ ಓಡಿ ಹೋಗಿದೆ. ಇನ್ನು ಪದೇ -ಪದೆ ನಡೆಯುತ್ತಿರುವ ಚಿರತೆ ದಾಳಿಗಳಿಂದ ಜನರು ಭಯಭೀತರಾಗಿದ್ದಾರೆ. ಚಿರತೆ ಸೆರೆ ಹಿಡಿಯಲು ಬೋನು ಇಡಲು ಸ್ಥಳೀಯರು ಆಗ್ರಹಿಸಿದ್ದಾರೆ.