ETV Bharat / state

’ದಿ ಕೇರಳ ಸ್ಟೋರಿ‘ ಭಯೋತ್ಪಾದನೆಯ ಪಿತೂರಿ ಆಧರಿಸಿದ ಚಿತ್ರ: ಪ್ರಧಾನಿ ನರೇಂದ್ರ ಮೋದಿ - Congress Manifesto

ದಿ ಕೇರಳ ಸ್ಟೋರಿ ಚಿತ್ರವು ಭಯೋತ್ಪಾದನೆಯ ಪಿತೂರಿಯನ್ನು ಆಧರಿಸಿದೆ. ಇದು ಭಯೋತ್ಪಾದನೆಯ ಕೊಳಕು ಸತ್ಯವನ್ನು ತೋರಿಸುತ್ತದೆ ಮತ್ತು ಭಯೋತ್ಪಾದಕರ ಹೇಗೆಲ್ಲ ಕಾರ್ಯ ನಿರ್ವಹಿಸುತ್ತಾರೆ ಎಂಬುದನ್ನ ಬಹಿರಂಗಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಳ್ಳಾರಿಯಲ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
author img

By

Published : May 5, 2023, 3:35 PM IST

Updated : May 5, 2023, 3:47 PM IST

ಪ್ರಧಾನಿ ನರೇಂದ್ರ ಮೋದಿ

ಬಳ್ಳಾರಿ: ಬಿ ಎಸ್ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ನೇತೃತ್ವದ ಡಬಲ್ ಇಂಜಿನ್ ಸರ್ಕಾರಕ್ಕೆ ಕೇವಲ ಮೂರೂವರೆ ವರ್ಷ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು. ಕಾಂಗ್ರೆಸ್ ಸರ್ಕಾರ ಇದ್ದಾಗ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಕೊಡುವ ಬದಲು ಭ್ರಷ್ಟಾಚಾರಕ್ಕೆ ಆದ್ಯತೆ ನೀಡಿತ್ತು. ಇದಕ್ಕೆ ಕಾರಣವೇನು? ಕಾಂಗ್ರೆಸ್​​​ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೇ ತಮ್ಮ ಸರ್ಕಾರ ದೆಹಲಿಯಿಂದ 100 ಪೈಸೆ ಕಳುಹಿಸಿದರೆ, ಬಡವರಿಗೆ ತಲುಪಿದ್ದು ಕೇವಲ 15 ಪೈಸೆ ಎಂದು ಹೇಳಿದ್ದರು. ಒಂದು ರೀತಿಯಲ್ಲಿ ಕಾಂಗ್ರೆಸ್ ಶೇ 85ರಷ್ಟು ಕಮಿಷನ್ ಸರ್ಕಾರ, ಇದನ್ನು ಅವರ ಈ ಹಿಂದಿನ ಪ್ರಧಾನಿಯೇ ಒಪ್ಪಿಕೊಂಡಿದ್ದರು ಎಂದು ಬಳ್ಳಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟೀಕಾಪ್ರಹಾರ ನಡೆಸಿದ್ದಾರೆ.

ಕರ್ನಾಟಕವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ಭದ್ರತಾ ವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಪ್ರಮುಖ ಅವಶ್ಯಕತೆಯಾಗಿದೆ. ಕರ್ನಾಟಕವು ಭಯೋತ್ಪಾದನೆಯಿಂದ ಮುಕ್ತವಾಗಿರುವುದೂ ಅಷ್ಟೇ ಮುಖ್ಯ. ಬಿಜೆಪಿ ಯಾವಾಗಲೂ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಆದರೆ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಂಡಾಗಲೆಲ್ಲಾ ಕಾಂಗ್ರೆಸ್‌ಗೆ ಹೊಟ್ಟೆ ನೋವು ಬರುತ್ತದೆ ಎಂದು ಮೋದಿ ಇದೇ ವೇಳೆ ಛೇಡಿಸಿದರು.

ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ದೇಶದ ವ್ಯವಸ್ಥೆ ಹಾಗೂ ದೇಶದ ರಾಜಕೀಯವನ್ನು ಭ್ರಷ್ಟಗೊಳಿಸುವ ಕೆಲಸ ಮಾಡಿದೆ. ಕಳೆದ ಕೆಲವು ವರ್ಷಗಳಲ್ಲಿ, ಕಾಂಗ್ರೆಸ್ ಭಾರತದ ರಾಜಕೀಯದಲ್ಲಿ ಮತ್ತೊಂದು ರೋಗವನ್ನು ಸೃಷ್ಟಿಸಿದೆ. ಚುನಾವಣೆಗಳನ್ನು ಗೆಲ್ಲಲು, ಕಾಂಗ್ರೆಸ್ ತನ್ನ ಪರಿಸರ ವ್ಯವಸ್ಥೆಯ ಆಧಾರದ ಮೇಲೆ, ಹಣದ ಆಧಾರದ ಮೇಲೆ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸುತ್ತದೆ. ಈ ಮೂಲಕ ಸಾರ್ವಜನಿಕರನ್ನು ದಾರಿತಪ್ಪಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ಕೃಷಿ ಮತ್ತು ವೈಭವದ ಸಂಸ್ಕೃತಿ ನಾಶವಾಗಲಿದೆ: ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್‌ಗಾಗಿ ಭಯೋತ್ಪಾದನೆಗೆ ಶರಣಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಇಂತಹ ಪಕ್ಷ ಎಂದಾದರೂ ಕರ್ನಾಟಕವನ್ನು ಉಳಿಸಲು ಸಾಧ್ಯವೇ? ಭಯೋತ್ಪಾದನೆಯ ವಾತಾವರಣದಲ್ಲಿ ಇಲ್ಲಿನ ಉದ್ಯಮ, ಐಟಿ ಉದ್ಯಮ, ಕೃಷಿ, ಕೃಷಿ ಮತ್ತು ವೈಭವದ ಸಂಸ್ಕೃತಿ ನಾಶವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೀಟ್ ಪರೀಕ್ಷೆ ದಿನವೇ ಪ್ರಧಾನಿ ರೋಡ್ ಶೋ: ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವೇಳಾಪಟ್ಟಿ ಬದಲಿಸಿಕೊಳ್ಳಲು ಹೆಚ್​ಡಿಕೆ ಆಗ್ರಹ

ದಿ ಕೇರಳ ಸ್ಟೋರಿ ಚಿತ್ರವು ಭಯೋತ್ಪಾದನೆಯ ಪಿತೂರಿಯನ್ನು ಆಧರಿಸಿದೆ. ಇದು ಭಯೋತ್ಪಾದನೆಯ ಕೊಳಕು ಸತ್ಯವನ್ನು ತೋರಿಸುತ್ತದೆ ಮತ್ತು ಭಯೋತ್ಪಾದಕರ ವಿನ್ಯಾಸವನ್ನು ಸಮಾಜಕ್ಕೆ ಬಹಿರಂಗಪಡಿಸುತ್ತದೆ. ಭಯೋತ್ಪಾದನೆ ಮತ್ತು ಭಯೋತ್ಪಾದನಾ ಪ್ರವೃತ್ತಿಯ ಚಿತ್ರಣವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಭಯೋತ್ಪಾದನೆಯನ್ನು ರಕ್ಷಿಸಿದೆ ಎಂದು ಮೋದಿ ಇದೇ ವೇಳೆ ಆರೋಪಿಸಿದರು.

ಕರ್ನಾಟಕವನ್ನು ನಂಬರ್ 1 ಮಾಡಲು ನಮ್ಮ ಬಳಿ ಮಾರ್ಗಸೂಚಿ ಇದೆ. ಆದರೆ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಕೇವಲ ನಕಲಿ ನಿರೂಪಣೆಗಳು ಮತ್ತು ನಿಷೇಧಗಳಿವೆ. ನಡುಗುವ ಸ್ಥಿತಿ ಅವರದ್ದು. ನಾನು ಬಜರಂಗ ಬಲಿಯನ್ನು ಆಹ್ವಾನಿಸುವುದು ಅವರಿಗೆ ಇಷ್ಟವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಯಾರ ಜೊತೆಗೂ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ, ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ: ಬಿಎಸ್​ವೈ

Last Updated : May 5, 2023, 3:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.