ETV Bharat / state

ವಿಮಾನ ನಿಲ್ದಾಣಕ್ಕಾದ ಗತಿಯೇ ಜಿಲ್ಲೆ ವಿಭಜನೆಗೂ ಆಗಲಿದೆ: ವಕೀಲ ಮಲ್ಲಿಕಾರ್ಜುನ ರೆಡ್ಡಿ

ಹಿರಿಯ ವಕೀಲರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಬಳ್ಳಾರಿ ಜಿಲ್ಲೆ ವಿಜಭನೆ ಸಂಬಂಧ ಮಾತನಾಡಿದ್ದು, ಚಾಗನೂರು - ಸಿರವಾರ ಬಳಿ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆದ ಗತಿಯೇ ಈ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಪ್ರಕ್ರಿಯೆಗೆ ಆಗುತ್ತದೆ ಎಂದಿದ್ದಾರೆ.

ವಕೀಲ ಮಲ್ಲಿಕಾರ್ಜುನ ರೆಡ್ಡಿ
Lawyer Mallikarjuna Reddy
author img

By

Published : Feb 4, 2021, 7:56 PM IST

ಬಳ್ಳಾರಿ: ಚಾಗನೂರು - ಸಿರವಾರ ಬಳಿ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆದ ಗತಿಯೇ ಈ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಪ್ರಕ್ರಿಯೆಗೆ ಆಗುತ್ತದೆ ಎಂದು ಹಿರಿಯ ವಕೀಲರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಎಚ್ಚರಿಕೆ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರೆ.

ವಕೀಲ ಮಲ್ಲಿಕಾರ್ಜುನ ರೆಡ್ಡಿ

ನಗರದಲ್ಲಿರುವ ತಮ್ಮ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಜಿಲ್ಲೆಯ ಕುರಿತಾದ ಪರ - ವಿರೋಧದ ಅಕ್ಷೇಪಣಾ ಅರ್ಜಿಗಳು ಸ್ವೀಕೃತಿಯಾಗಿರುವ ಸಂಖ್ಯಾಬಲ ಇಲ್ಲಿ ಪರಿಗಣನೆಗೆ ಬರಲ್ಲ. ರಾಜ್ಯ ಸರ್ಕಾರ ಮೊಂಡು ವಾದವನ್ನು ತಾಳಿದರೆ ಕಾನೂನಾತ್ಮಕ ಸಮಸ್ಯೆ ಎದುರಿಸಬೇಕಾಗುತ್ತದೆ. ವಿಜಯನಗರ ಜಿಲ್ಲೆಯನ್ನಾಗಿ ಘೋಷಣೆ ಮಾಡಿ ಮತ್ತೇನಾದರೂ ಆದೇಶ ಹೊರಡಿಸಿದ್ದೇ ಆದರೆ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರ ಸೂಕ್ತ ಸಮಜಾಯಿಷಿ ನೀಡಬೇಕಾಗುತ್ತದೆ ಎಂದರು.

ನಮ್ಮದಂತೂ ಕಾನೂನು ಹೋರಾಟ ಕಡ್ಡಾಯವಾಗಿರುತ್ತದೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಖಂಡಿತವಾಗಿಯೂ ಕೂಡ ನ್ಯಾಯಾಲಯದ ಮೊರೆ ಹೋಗಿಯೇ ತೀರುತ್ತೇವೆ ಎಂದರು.

ಚಾಗನೂರು- ಸಿರವಾರ ಬಳಿ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಇಂದಿಗೆ 13 ವರ್ಷ ಕಳೆದವು. ಅದು ಈಗ ಏನಾಯಿತೆಂಬುದು ಎಲ್ಲರಿಗೂ ಗೊತ್ತಾದ ವಿಚಾರ. ಅದರಂತೆಯೇ ಅಖಂಡ ಬಳ್ಳಾರಿ ವಿಭಜನೆ ಪರಿಸ್ಥಿತಿಯಾಗಲಿದೆ ಎಂದು ಕಾದು ನೋಡಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.