ಹೊಸಪೇಟೆ: ಸುಮಾರು 1.25 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಬ್ಯಾರಿಕೇಡಿಂಗ್ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಹುಡಾ ಅಧ್ಯಕ್ಷ ಅಶೋಕ ಜೀರೆ ಅವರು ನೆರವೇರಿಸಿದರು.
ನಗರದಲ್ಲಿ ಲೋಕೋಪಯೋಗಿ ಇಲಾಖೆಯ 2019-20ನೇ ಸಾಲಿನ ಡಿಎಂಎಫ್ ಯೋಜನೆಯಡಿ ಸುಮಾರು 1.25 ಕೋಟಿ ರೂ. ಮಂಜೂರಾಗಿದ್ದು, ಇದರಡಿಯಲ್ಲಿ ಸಿಸಿ ರಸ್ತೆ ಹಾಗೂ ಬ್ಯಾರಿಕೇಡಿಂಗ್ ನಿರ್ಮಾಣ ಕಾಮಗಾರಿ ನಡೆಯಲಿದೆ. ಇದಕ್ಕೆ ಇಂದು ಚಾಲನೆ ದೊರೆತಿದೆ.
ಇದು ನಗರದ 100 ಹಾಸಿಗೆ ಆಸ್ಪತ್ರೆ ರಸ್ತೆಯ ದೋಬಿಘಾಟ್ ದಿಂದ ನಾಗಪ್ಪ ಕಟ್ಟೆವರೆಗೂ ಸಿಸಿ ರಸ್ತೆ ಹಾಗೂ ಬ್ಯಾರಿಕೇಡಿಂಗ್ ನಿರ್ಮಾಣ ಕಾಮಗಾರಿ ನಡೆಯಲಿದೆ ಎನ್ನಲಾಗುತ್ತಿದೆ.
ಈ ವೇಳೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಆರ್. ಕೋಟ್ರೇಶ್, ಅನಂತ ಪದ್ಮನಾಭ, ಸಾಲಿ ಸಿದ್ಧಯ್ಯಸ್ವಾಮಿ ಇನ್ನಿತರರಿದ್ದರು.