ಹೊಸಪೇಟೆ: ಕಂಪ್ಲಿಯಲ್ಲಿ ಭೂರಹಿತ ದಲಿತ, ಆದಿವಾಸಿ, ಅಲೆಮಾರಿ, ಅರಣ್ಯವಾಸಿಗಳಿಗೆ ನಿವೇಶನ ಹಾಗೂ ಜಮೀನು ಸೌಲಭ್ಯವನ್ನು ಒದಗಿಸಬೇಕು ಎಂದು ಆಗ್ರಹಿಸಿ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.
ಭೂಮಿ, ವಸತಿಗೆ ಸಂಬಂಧಿತ ಸಮಸ್ಯೆಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು. ಅತಂತ್ರದಲ್ಲಿರುವ ಅರ್ಹರಿಗೆ ಭೂಮಿ ವಿತರಿಸಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ವಂಚಿತರಿಗೆ ಸರ್ಕಾರಿ ಸೌಲಭ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮುಖಂಡರಾದ ವಸಂತರಾಜ ಕಹಳೆ, ಡಿ.ಹೆಚ್.ಪೂಜಾರ್, ಕರಿಯಪ್ಪ ಗುಡಿಮನಿ, ಇ.ಧನಂಜಯ ಇನ್ನಿತರರಿದ್ದರು.