ETV Bharat / state

ವಿಜಯನಗರ: ರೇಷನ್ ಕಿಟ್ ಪಡೆಯಲು ಮುಗಿಬಿದ್ದ ಕಾರ್ಮಿಕರು - food kits

ರೇಷನ್ ಕಿಟ್ ಪಡೆಯಲು ಕಾರ್ಮಿಕರು ಮುಗಿಬಿದ್ದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣ ಬಾಬು ಜಗಜೀವನ್ ರಾವ್ ಭವನದಲ್ಲಿ ನಡೆದಿದೆ.

vijaynagar
ರೇಷನ್ ಕಿಟ್ ಪಡೆಯಲು ಮುಗಿಬಿದ್ದ ಕಾರ್ಮಿಕರು
author img

By

Published : Jul 12, 2021, 3:25 PM IST

ಹೊಸಪೇಟೆ(ವಿಜಯನಗರ): ರೇಷನ್ ಕಿಟ್ ಪಡೆಯಲು ಕಾರ್ಮಿಕರು ಮುಗಿಬಿದ್ದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣ ಬಾಬು ಜಗಜೀವನ್ ರಾವ್ ಭವನದಲ್ಲಿ ಇಂದು ನಡೆದಿದೆ.

ರೇಷನ್ ಕಿಟ್ ಪಡೆಯಲು ಮುಗಿಬಿದ್ದ ಕಾರ್ಮಿಕರು

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ ಮುಂದಾದಾಗ ನೂಕು ನುಗ್ಗಲು ಉಂಟಾಗಿದೆ. ರೇಷನ್ ಕಿಟ್​ಗಾಗಿ ಟೋಕನ್ ಪಡೆಯಲು‌ ಕಾರ್ಮಿಕರು ಓಡೋಡಿ ಬಂದರು. ಆ ಸಂದರ್ಭದಲ್ಲಿ ಟೋಕನ್ ಪಡೆಯಲು ಹೋಗಿ ಒಬ್ಬರು ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಬಿದ್ದ​ ಮಹಿಳೆಗೆ ಯಾವುದೇ ಅಪಾಯ ಆಗಿಲ್ಲ.

ಜನಜಂಗುಳಿಗೆ ಕೆಲಹೊತ್ತು ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ರು. ನಂತರ ಎಚ್ಚೆತ್ತ ಪೊಲೀಸರು ಕಾರ್ಮಿಕರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಟೋಕನ್ ನನಗೆ ಕೊಡಿ ಎಂದು ಕಾರ್ಮಿಕರು ಪೊಲೀಸರನ್ನೇ ಸುತ್ತುವರೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.