ಹೊಸಪೇಟೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ನಿಟ್ಟೂರು ಗ್ರಾಮದ ಎಲ್ ಆ್ಯಂಡ್ ಟಿ ಕಂಪನಿಯ 16 ಜನ ಸಿಬ್ಬಂದಿಗೆ ಕೊರೊನಾ ತಗುಲಿದೆ.
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಅಲ್ಲದೆ, ಕಂಪನಿಯ ಸಿಬ್ಬಂದಿ ಜೊತೆಗೆ ಒಡನಾಟವಿದ್ದಲ್ಲಿ ಸ್ವಯಂಪ್ರೇರಿತರಾಗಿ 7 ದಿನಗಳ ಕಾಲ ಪ್ರತ್ಯೇಕವಾಗಿ ಹೋಂ ಐಸೋಲೇಷನ್ ಒಳಪಡಬೇಕು. ಒಂದು ವೇಳೆ ಕೋವಿಡ್ ಲಕ್ಷಣಗಳು ಕಂಡು ಬಂದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹರಪನಹಳ್ಳಿ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 'RT-PCR ನೆಗೆಟಿವ್ ವರದಿ ಹಿಡಿದು ನಮ್ಮ ಮದುವೆಗೆ ಬನ್ನಿ'