ಹೊಸಪೇಟೆ: ವಿಶ್ವ ಮಾನವ ರಾಷ್ಟ್ರ ಕವಿ ಕುವೆಂಪು ಅವರು ದೇಶಕ್ಕೆ ಮಾದರಿ. ಮಾನವರು ಎಲ್ಲರೂ ಒಂದೆ. ಸಾಮಾಜಿಕ ಸಾಮರಸ್ಯವನ್ನು ಕವಿತೆ, ಕಾದಂಬರಿ ಮೂಲಕ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯ ಪ್ರೊ.ಚ.ರಾಮಸ್ವಾಮಿ ಹೇಳಿದರು.
ವಿಜಯನಗರ ಮಹಾವಿದ್ಯಾಲಯದಲ್ಲಿ ಕುವೆಂಪು 116ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಅಳಿವಿನಂಚಿನ ಭಾಷಗಳ ಅಧ್ಯಯನ ಕೇಂದ್ರ ವಿಚಾರದ ಕುರಿತು ಅವರು ಮಾತನಾಡಿದರು.
ರಾಮನು ಕುವೆಂಪು ಅವರಿಗೆ ಆದರ್ಶವಾಗಿದ್ದ. ಶ್ರೀರಾಮ ತಂದೆಗೆ ತಕ್ಕ ಮಗನಾಗಿದ್ದ. ರಾಮನಿಗೆ ಸ್ವಂತಿಕೆ ಎಂಬುದು ಇರಲಿಲ್ಲ. ಬೇರೆಯವರ ಮಾತನ್ನು ಕೇಳಿ ಕಾಡಿಗೆ ಹೋಗುತ್ತಾನೆ. ಬುದ್ದನು ಸ್ವಂತ ಆಲೋಚನೆಯಿಂದ ಸಂಸಾರ ತ್ಯಜಿಸುತ್ತಾನೆ. ಜೀವನದಲ್ಲಿ ಕಷ್ಟ ನೋವು-ನಲಿವನ್ನು ತಿಳಿದುಕೊಂಡು ಆಸೆಯ ದುಃಖಕ್ಕೆ ಮೂಲ ಎಂದು ಹೇಳುತ್ತಾನೆ ಎಂದರು.
ನಾವು ಜೀವನದಲ್ಲಿ ಶ್ರೇಷ್ಠ ವ್ಯಕ್ತಿಗಳನ್ನೇ ಅನುಸರಿಸಬೇಕು. ಧರ್ಮೋ ರಕ್ಷತಿ ರಕ್ಷಿತಃ ಎಂದರೆ ಪಂಚ ಮಂತ್ರ ಮತ್ತು ಸಪ್ತಸೂತ್ರ. ಪಂಚಶೀಲ, ಪಂಚ ಭೂತ. ಇವುಗಳಿಂದ ವಿಶೇಷ ಪ್ರಪಂಚ ಸೃಷ್ಟಿಯಾಗಿದೆ. ಭೂಮಿಯಲ್ಲಿರುವ ಜೀವಿಗಳು ಪಂಚಭೂತದಿಂದ ಉತ್ಪತ್ತಿ ಯಾಗಿದೆ. ಮಾನವ ಶರೀರದಲ್ಲಿ ಪಂಚಭೂತವಿದೆ. ಪ್ರತಿಯೊಂದು ಮಗು ಹುಟ್ಟುತ್ತಲೇ ವಿಶ್ವ ಮಾನವ. ಎರಡನೇ ತಾಯಿ ಶಾಲೆ. ಮೂರನೇ ತಾಯಿ ಸಮಾಜ. ಅದಕ್ಕಾಗಿ ಜಾತಿ ಧರ್ಮವನ್ನು ಬಿಟ್ಟು ಬದುಕಬೇಕು ಎಂದು ಅಭಿಪ್ರಾಯಪಟ್ಟರು.
ಮತ ಜಾತಿ ಜನಾಂಗ. ಶಾಲೆಗಳಲ್ಲಿ ಅದಕ್ಕಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಕುರಿತು ಬರೆಯುವುದನ್ನು ನಿಲ್ಲಿಸಬೇಕು. ಧರ್ಮ ಕೇಳಿದರೆ ಧರ್ಮವಿಲ್ಲ ಎಂದು ಹೇಳಿ ಎಂದು ಹೇಳಿದರು.