ETV Bharat / state

ಬಳ್ಳಾರಿಯ 11 ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆ - ಬಳ್ಳಾರಿಯ 11 ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆ

ಜಿಲ್ಲೆಯಲ್ಲಿ ಒಟ್ಟು 6,509 ವಿದ್ಯಾರ್ಥಿಗಳು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದು, ವಿದ್ಯಾರ್ಥಿಗಳು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು.

Kset
Kset
author img

By

Published : Apr 9, 2021, 6:03 PM IST

ಬಳ್ಳಾರಿ: ಮೈಸೂರು ವಿಶ್ವ ವಿದ್ಯಾಲಯವು ಏ.11 ರಂದು ಆಯೋಜಿಸಿರುವ ಕೆ-ಸೆಟ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ಜಿಲ್ಲೆಯ 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ವಿವಿಯ ಕುಲಸಚಿವರು ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ವಿವರ:

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಎಸ್‍ಎಸ್‍ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ), ಶ್ರೀ ಗುರುತಿಪ್ಪೇರುದ್ರ ಕಾಲೇಜು, ಶ್ರೀಮತಿ ಗಾಲಿ ರುಕ್ಮಿಣಿಯಮ್ಮ ಚೆಂಗಾರೆಡ್ಡಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ವೀರಶೈವ ಕಾಲೇಜು, ಶೆಟ್ಟರ್ ಗುರುಶಾಂತಪ್ಪ (ಸಂಯುಕ್ತ) ಪದವಿ ಪೂರ್ವ ಕಾಲೇಜು, ಶ್ರೀಮತಿ ಅಲ್ಲಂ ಸುಮಂಗಳಮ್ಮ ಮೆಮೋರಿಯಲ್ ಕಾಲೇಜು ಆಫ್ ವುಮೆನ್ಸ್, ನ್ಯೂ ಚೈತ್ಯನ್ಯ ಪಿ.ಯು. ಕಾಲೇಜು, ಮತ್ತು ರಾವ್‍ಬಹುದ್ದೂರ್ ವೈ ಮಹಾಬಲೇಶ್ವಪ್ಪ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಒಟ್ಟು 11 ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು 6,509 ವಿದ್ಯಾರ್ಥಿಗಳು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದು, ವಿದ್ಯಾರ್ಥಿಗಳು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು.

ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್, ಗ್ಲೌಸ್‍ಗಳನ್ನು ಬಳಸಬೇಕು, ಕಡ್ಡಾಯವಾಗಿ ಗುರುತಿನ ಪತ್ರದೊಂದಿಗೆ (ಹಾಲ್‍ಟಿಕೇಟ್) ಪರೀಕ್ಷಾ ಸಮಯಕ್ಕೆ ಸರಿಯಾಗಿ ಕೊಠಡಿಯಲ್ಲಿ ಹಾಜರಿರಬೇಕು ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.