ಬಳ್ಳಾರಿ : ಸಾಮಾಜಿಕ ನ್ಯಾಯ ಮತ್ತು ತಳ ಸಮುದಾಯಗಳ ಅಭಿವೃದ್ಧಿಯ ವಿಷಯದಲ್ಲಿ ನಾವು ಇಂದು ಡಾ.ಬಿ .ಆರ್. ಅಂಬೇಡ್ಕರ್ ಅವರನ್ನು ನೆನೆಯಲೇಬೇಕಾದ ಅವಶ್ಯಕತೆ ಇದೆ. ಅವರ ಜೀವನ ಮಾರ್ಗ ಮತ್ತು ಅವರ ಶೈಕ್ಷಣಿಕ ಸಾಧನೆ ಎಲ್ಲರಿಗೂ ಮಾದರಿಯಾಗಿದೆ ಎಂದು ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲ ಸಚಿವೆ ತುಳಸಿಮಾಲಾ ಅವರು ಅಭಿಪ್ರಾಯಪಟ್ಟರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರ 129ನೆಯ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ರಾದ ಪ್ರೊ. ಬಸವರಾಜ ಬೆಣ್ಣಿ ಮಾತನಾಡಿ, ಪ್ರಪಂಚದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ದೇಶಾದ್ಯಂತ ಮೇ 3 ರವರೆಗೆ ಎರಡನೇ ಹಂತದ ಲಾಕ್ ಡೌನ್ ಮುಂದುವರೆದಿದೆ. ಆದರೂ ವಿಶ್ವವಿದ್ಯಾಲಯ ಬಾಬಾಸಾಹೇಬರ 129ನೆಯ ಜನ್ಮ ದಿನಾಚರಣೆಯನ್ನು ಅಂತರ್ಜಾಲ ಸೌಲಭ್ಯದ ಮೂಲಕ ನಾವು ಇಂದು ವಿಶೇಷವಾಗಿ ಆಚರಣೆ ಮಾಡುತ್ತಿದ್ದೇವೆ ಎಂದರು.
ಆನ್ ಲೈನ್ ಸಹಾಯದಿಂದ ಝೂಮ್ ಆಪ್ ಮೂಲಕ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.