ETV Bharat / state

ಇಂಡಿಯಾ ಬುಕ್ ಆಫ್ ರೇಕಾರ್ಡ್ ಪುಟ ಸೇರಿದ ಕೃಷ್ಣಭಕ್ತ..! - India Book of Record Page

ಭಗವದ್ಗೀತೆಯ 700 ಶ್ಲೋಕಗಳನ್ನ ಕೇವಲ 73 ನಿಮಿಷದಲ್ಲಿ ಪಠಣ ಮಾಡೋ ಮುಖೇನ ಕೃಷ್ಣಭಕ್ತನೊಬ್ಬ ಇಂಡಿಯಾ ಬುಕ್ ಆಫ್ ರೇಕಾರ್ಡ್ ಪುಟ ಸೇರಿದ್ದಾರೆ.

India Book of Record Page
ಇಂಡಿಯಾ ಬುಕ್ ಆಫ್ ರೇಕಾರ್ಡ್ ಪುಟ ಸೇರಿದ ಕೃಷ್ಣಭಕ್ತ..!
author img

By

Published : Mar 10, 2020, 9:46 AM IST

ಬಳ್ಳಾರಿ: ಗಣಿನಾಡಿನ ಕೃಷ್ಣಭಕ್ತ ಕೃಷ್ಣಚಂದ್ರಹಾಸ ಎಂಬುವವರು ಕೇವಲ 73 ನಿಮಿಷದಲ್ಲಿ ಸರಿಸುಮಾರು ಭಗವದ್ಗೀತೆಯ 700 ಶ್ಲೋಕ ಪಠಿಸಿ ಇಂಡಿಯಾ ಬುಕ್ ಆಫ್ ರೇಕಾರ್ಡ್ ಸಂಸ್ಥೆಯಿಂದ ಪ್ರಮಾಣಪತ್ರ, ಮೆಡಲ್ ಪಡೆದುಕೊಂಡಿದ್ದಾರೆ.

ನಗರದ ಮಯೂರ ಹೊಟೇಲ್​ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಕೃಷ್ಣಚಂದ್ರಹಾಸ, ಭಗವದ್ಗೀತೆಯ 700 ಶ್ಲೋಕಗಳನ್ನ ಪಠಣ ಮಾಡೋ ಮುಖೇನ ಮೆಡಲ್ ಪಡೆಯುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದರು.

ಮೂಲತಃ ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದಲ್ಲಿರೊ ಇಸ್ಕಾನ್ ಸಂಸ್ಥೆಯ ಶ್ರೀಕೃಷ್ಣನ ಆಶ್ರಮದಲ್ಲಿ ನೆಲೆಸಿರುವ ಕೃಷ್ಣ ಚಂದ್ರದಾಸ ಅವರು, ಬೆಂಗಳೂರಿನಲ್ಲಿ ಜನವರಿ 27 ರಂದು ಸಂಜೆ 5.12 ರಿಂದ 6.25 ನಿಮಿಷದವರೆಗೆ ನಡೆದ ಕಾರ್ಯಕ್ರಮದಲ್ಲಿ ಅಂದಾಜು 700 ಶ್ಲೋಕಗಳನ್ನ ಪಠಣ ಮಾಡಿದ್ದಾರೆ‌.

ಇದರ ಉದ್ದೇಶವೇನೆಂದರೆ ಅತ್ಯಂತ ಕಡಿಮೆ ಅವಧಿಯಲ್ಲೂ ಕೂಡ ಭಗವದ್ಗೀತೆಯ ಶ್ಲೋಕಗಳನ್ನ ಪಠಣ ಮಾಡುವ ಶಕ್ತಿ ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇದೆ ಹಾಗೂ ಈ ಶ್ಲೋಕಗಳ ಪಠಣೆಯಿಂದ ಕೃಷ್ಣನಿಗೆ ಹತ್ತಿರವಾಗುತ್ತಾರೆ ಎಂದರು. ಮಕ್ಕಳಲ್ಲೂ ಕೂಡ ಶ್ಲೋಕಗಳ ಬಗ್ಗೆ ಅರಿವು ಮೂಡಿಸುವ ಹಾದಿ ಸುಗಮ ಆಗಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.