ಹೊಸಪೇಟೆ: ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಹಾಗೂ ಹುರುಳಿಹಾಳ್ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಗುರುವಾರ ಸಂಜೆ ಬೆಂಕಿ ಹಚ್ಚಿ, ವಿಕೃತಿ ಮೆರೆದಿದ್ದಾರೆ.
ಓದಿ: ಪ್ರೇಮಿಗಳ ದಿನಕ್ಕೆ ವಿರೋಧ: ವಿಡಿಯೋ ಸಂದೇಶ ಹರಿಬಿಟ್ಟ ಪ್ರಮೋದ್ ಮುತಾಲಿಕ್
ರಸ್ತೆ ಪಕ್ಕದ ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಟ್ಯಾಂಕರ್ ನಿಂದ ಬೆಂಕಿ ನಂದಿಸಿ ಅರಣ್ಯ ರಕ್ಷಣೆ ಮಾಡಿದ್ದಾರೆ. ಈ ರಸ್ತೆಯು ಚಿಕ್ಕಜೋಗಿಹಳ್ಳಿ ಮೊಳಕಾಲ್ಮೂರಿನಿಂದ ಆಂಧ್ರ ಪ್ರದೇಶಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಾಗಿದೆ.
ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.