ETV Bharat / state

ಆಧಾರ್​ ಕಾರ್ಡ್ ಆಧಾರಿತ ಹಣ ಪಾವತಿ: ದೇಶಕ್ಕೆ ಪ್ರಥಮ ಸ್ಥಾನ ಪಡೆದ ಕೊಂಡನಾಯಕಹಳ್ಳಿ - Hosapete Kondanayakanahalli News

ಕೊಂಡನಾಯಕಹಳ್ಳಿ ಅಂಚೆ ಕಚೇರಿಯು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದು, ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸ್ಥಳೀಯವಾಗಿ ಜನರಿಗೆ ಸುಲಭ ರೀತಿಯಲ್ಲಿ ಹಣ ಸಿಗುವ ಸೌಲಭ್ಯ ನೀಡಿದ್ದು, ಈ ಸಾಧನೆಗೆ ಕಾರಣವಾಗಿದೆ.

kondanayakana-halli
ದೇಶಕ್ಕೆ ಪ್ರಥಮ ಸ್ಥಾನ ಪಡೆದ ಕೊಂಡನಾಯಕಹಳ್ಳಿ
author img

By

Published : Feb 10, 2021, 6:51 PM IST

Updated : Feb 10, 2021, 7:36 PM IST

ಹೊಸಪೇಟೆ: ನಗರದ ಕೊಂಡನಾಯಕಹಳ್ಳಿ ಅಂಚೆ ಕಚೇರಿಯು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದೆ. ಅಂಚೆ ಕಚೇರಿಯು ಸ್ಥಳೀಯವಾಗಿ ಜನರಿಗೆ ಸುಲಭ ರೀತಿಯಲ್ಲಿ ಹಣ ಸಿಗುವ ಸೌಲಭ್ಯ ನೀಡಿದ್ದು, ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ಕೊಂಡನಾಯಕಹಳ್ಳಿಯಲ್ಲಿ 4,000 ಮನೆಗಳಿದ್ದು, 10 ಸಾವಿರ ಜನರು ವಾಸ ಮಾಡುತ್ತಿದ್ದಾರೆ. ಸ್ಥಳೀಯವಾಗಿ ಬ್ಯಾಂಕ್ ಹಾಗೂ ಎಟಿಎಂ ಸೌಲಭ್ಯವಿಲ್ಲ. ಜನರು ದುಡ್ಡು ಪಡೆಯಲು 1 ಕಿ.ಮೀ. ದೂರವಿರುವ ಮಲಪಣಗುಡಿ ಅಥವಾ 5 ಕಿ.ಮೀ ದೂರವಿರುವ ಬ್ಯಾಂಕ್​ ಕಚೇರಿಗೆ ಕ್ರಮಿಸಬೇಕಾಗಿತ್ತು. ಆದರೆ, ಈಗ ಅಂಚೆ ಕಚೇರಿಯಲ್ಲಿ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಜನರು ಸುಲಭವಾಗಿ ದುಡ್ಡನ್ನು ಪಡೆಯುತ್ತಿದ್ದಾರೆ. ಶಾಖೆಯ ಪೋಸ್ಟ್ ಮಾಸ್ಟರ್ ರೇಣುಕಾ ಅವರು ಮನೆಯಲ್ಲಿ ಅಂಚೆ ಕಚೇರಿಯನ್ನು ತೆರೆದುಕೊಂಡು, ಜನರಿಗೆ ಸೌಲಭ್ಯವನ್ನು ನೀಡುತ್ತಿದ್ದಾರೆ. ಅಂಗವಿಕರಿಗೆ, ವೃದ್ಧರಿಗೆ ಮನೆ ಬಾಗಿಲಿನಲ್ಲಿ ಸೌಲಭ್ಯ ಸಿಗುತ್ತಿದೆ.

ದೇಶಕ್ಕೆ ಪ್ರಥಮ ಸ್ಥಾನ ಪಡೆದ ಕೊಂಡನಾಯಕಹಳ್ಳಿ

ಏನಿದು ಯೋಜನೆ?: ಆಧಾರ ಕಾರ್ಡ್ ಆಧಾರಿತ ಹಣ ಪಾವತಿ ಯೋಜನೆ ಇದಾಗಿದೆ. ಆಧಾರ್​ ಕಾರ್ಡ್ ಮೂಲಕ ಜನರು ದುಡ್ಡನ್ನು ಪಡೆಯಬಹುದು. ಒಂದು ದಿನಕ್ಕೆ ಒಬ್ಬರು 10 ಸಾವಿರ ರೂ. ಹಣವನ್ನು ಡ್ರಾ ಮಾಡಿಕೊಳ್ಳಬಹುದು. ಅಂಚೆ ಕಚೇರಿ ಸಿಬ್ಬಂದಿ ಮೊದಲು ಆಧಾರ್​ ಸಂಖ್ಯೆಯನ್ನು ಮೊಬೈಲ್​ನಲ್ಲಿ ನಮೂದಿಸುತ್ತಾರೆ. ಬಳಿಕ ಜನರು ಹೆಬ್ಬೆರಳಿನ ಗುರುತನ್ನು ನೀಡಬೇಕಾಗುತ್ತದೆ. ಬಳಿಕ ಹಣ ಜನರ ಕೈಗೆ ಸೇರಲಿದೆ. ಜನರಿಗೆ ಸ್ಥಳೀಯವಾಗಿ ಹಾಗೂ ಇದರಲ್ಲಿಯೇ ಹಣವನ್ನು ಡ್ರಾ ಮಾಡಿಕೊಳ್ಳಬಹುದಾಗಿದೆ. ಬ್ಯಾಂಕ್ ಹಾಗೂ ಎಟಿಎಂಗೆ ಅಲೆದಾಡುವ ಅವಶ್ಯಕತೆ ಇರುವುದಿಲ್ಲ.

ದೇಶಕ್ಕೆ ಪ್ರಥಮ: ಕೊಂಡನಾಯಕಹಳ್ಳಿಯಲ್ಲಿ ಜನವರಿ ತಿಂಗಳಿನಲ್ಲಿ 820 ಜನರು 17 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದಾರೆ.‌ ‌ಇಡೀ ದೇಶಕ್ಕೆ ಹಂಪಿ ಉಪ ವಿಭಾಗದ ಕೊಂಡನಾಯಕ ಹಳ್ಳಿ ಅಂಚೆ ಕಚೇರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ‌. ಪೋಸ್ಟ್​ ಮಾಸ್ಟರ್​ ರೇಣುಕಾ ಅವರು ಈ ಸಾಧನೆ ಮಾಡುವ ಮೂಲಕ ಹೊಸಪೇಟೆಗೆ ಉತ್ತಮ ಹೆಸರನ್ನು ತಂದಿದ್ದಾರೆ.

ರೀಚಾರ್ಜ್, ವಿದ್ಯುತ್ ಬಿಲ್, ಫೋನ್ ಬಿಲ್, ವೃದ್ಧಾಪ್ಯ ವೇತನ, ಕಿಸಾನ್ ಸಮ್ಮಾನ್, ಸ್ತ್ರೀ ಶಕ್ತಿ ಯೋಜನೆ ಇವೆಲ್ಲವನ್ನೂ ಅಂಚೆ ಕಚೇರಿ ಮೂಲಕ ಜನರು ಪಡೆದಿದ್ದಾರೆ.‌ ಕೊಂಡನಾಯಕ ಹಳ್ಳಿ ಜನ ಅಷ್ಟೇ ಅಲ್ಲ, ಸಮೀಪದ ನಾಗೇನಹಳ್ಳಿ ಹಾಗೂ ತಾಂಡಾ, ಮಲಪಣಗುಡಿ ತಾಂಡಾ, ಬೆನಕಾಪುರ, 82 ಡಾಣಾಪುರ ಜನರು ಹಣ ಡ್ರಾ ಮಾಡಲು ಇಲ್ಲಿಗೆ ಬರುತ್ತಿದ್ದಾರೆ.

Last Updated : Feb 10, 2021, 7:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.