ಹೊಸಪೇಟೆ: ನಗರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಬಿರುಸಿನಿಂದ ಸಾಗಿದೆ. ಉಪ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸಿದ್ಧರಾಗುತ್ತಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ನಗರದ ಕಿಚಡಿ ಕೊಟ್ರೇಶ ನಾಮಪತ್ರ ಸಲ್ಲಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯನಗರದ ಜನರು ಬದಲಾವಣೆ ಬಯಸುತ್ತಿದ್ದಾರೆ. ಯುವಕರು ರಾಜಕೀಯದಲ್ಲಿ ಮುಂದುವರಿಯಬೇಕೆಂಬ ಆಸೆಯಿಂದ ನಾಮಪತ್ರಸಲ್ಲಿಕೆ ಮಾಡಿಸಿದ್ದಾರೆ ಎಂದರು.
ಕ್ಷೇತ್ರದಲ್ಲಿ ಕುಡಿಯುವ ನೀರು, ರೈತರ ಸಮಸ್ಯೆ, ಕಬ್ಬಿನ ಕಾರ್ಖಾನೆ ಸಮಸ್ಯೆ ಸೇರಿದಂತೆ ರಸ್ತೆಗಳ ಕಥೆ ಹೇಳತೀರದಾಗಿದೆ. ಹಿಂದಿನ ಶಾಸಕರ ಆಡಳಿತವನ್ನು ನೋಡಿ ಜನರಿಗೆ ಬೇಸರವಾಗಿದೆ. ಅದಕ್ಕಾಗಿ ನನಗೆ ಉಪ ಚುನಾವಣೆಗೆ ಸ್ಪರ್ಧಿಸಲು ಸಹಕಾರ ನೀಡಿದ್ದಾರೆ. ತಾಲೂಕಿನ ಜನರು ಬಹುಮತದಿಂದ ನನ್ನನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.