ಹೊಸಪೇಟೆ: ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಕೊಟ್ಟೂರು ಸ್ವಾಮಿಗಳ ಕಾರ್ತಿಕ ಮಂಗಲ ಮಹೋತ್ಸವವನ್ನು ನಡೆಯಿತು. ಇದೇ ಸಂದರ್ಭದಲ್ಲಿ ಮಠದ ಡಾ.ಸಂಗನಬಸವ ಸ್ವಾಮೀಜಿ ದೀಪಗಳನ್ನು ಬೆಳಗಿಸಿದರು.
ನೂರಾರು ಭಕ್ತರು ಮಠದ ಆವರಣದಲ್ಲಿ ದೀಪಗಳನ್ನು ಬೆಳಗಿಸಿದ ಬಳಿಕ ಮಾತನಾಡಿದ ಸ್ವಾಮೀಜಿ ಅವರು, ದೀಪಗಳನ್ನು ಬೆಳಗಿಸುವುದು ಸಾಂಸ್ಕೃತಿಕ ಪರಂಪರೆಯಾಗಿದೆ. ದೀಪೋತ್ಸವದಿಂದ ಅಜ್ಞಾನ ದೂರವಾಗುತ್ತದೆ. ಜ್ಞಾನವಂತರಾಗಬೇಕು, ದೇಶಭಕ್ತರಾಗಬೇಕು, ದೇವಿ ಭಕ್ತರಾಗಬೇಕಾಗಿದೆ. ಎಲ್ಲರನ್ನೂ ಪ್ರೀತಿಸಬೇಕು ಹಾಗೂ ಗೌರವಿಸಬೇಕು ಎಂದರು.
ಓದಿ: ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ಹಾಗೂ ಬಿಬಿಎಂಪಿಯಿಂದ 'ಫಿಟ್ ಇಂಡಿಯಾ ಸೈಕ್ಲೋಥಾನ್'
ಲಕ್ಷ ದೀಪಗಳನ್ನು ಬೆಳಗಿಸಿ ಸಮಾಜ ಘಾತುಕ ಕೆಲಸಗಳನ್ನು ಮಾಡಿದರೆ ಸಾರ್ಥಕವಾಗುವುದಿಲ್ಲ. ದೀಪ ಬೆಳಗಿಸುವುದರಿಂದ ದೇಶದ ಅಭಿವೃದ್ಧಿ ಹಾಗೂ ದೇಶದ ಕಲ್ಯಾಣವಾಗಲಿದೆ. ಇದನ್ನು ತಿಳಿಸುವುದಕ್ಕಾಗಿ ಹಿರಿಯರು ದೀಪದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.