ಹೊಸಪೇಟೆ : ಹೊಸಪೇಟೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಳಿವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಟ್ವಿಟರ್ ಅಭಿಯಾನವನ್ನು ಆರಂಭಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ ಎ ನಾರಾಯಣಗೌಡ ಅವರು, ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಒದಗಿಸದೆ ರಾಜ್ಯ ಸರ್ಕಾರ ನಿಧಾನವಾಗಿ ವಿಷವುಣಿಸಿ ಕೊಲ್ಲುತ್ತಿದೆ. ನಾವು ಒಟ್ಟಾಗಿ ನಿಂತು ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸಬೇಕಾಗಿದೆ. ಡಿ.18 ರಂದು ಸಂಜೆ ಕರವೇ ಆಯೋಜಿಸಿರುವ ಅಭಿಯಾನದಲ್ಲಿ ಮಾತನಾಡೋಣ. ಸರ್ಕಾರವನ್ನು ಎಚ್ಚರಿಸೋಣ ಎಂದಿದ್ದಾರೆ.#ಕನ್ನಡ ವಿವಿ ಉಳಿಸಿ ಎಂಬ ಹ್ಯಾಷ್ ಟ್ಯಾಗ್ ಮೂಲಕ ಕರವೇ ಆಕ್ರೋಶ ಹೊರ ಹಾಕಿದೆ.