ETV Bharat / state

ಎಸಿಬಿ ಬಲೆಗೆ ಬಿದ್ದ ಪಿಡಿಒ.. ಇಬ್ಬರು ಗ್ರಾಪಂ ಸದಸ್ಯರನ್ನ ವಶಕ್ಕೆ ಪಡೆದ ಪೊಲೀಸರು - acb officers raid in kampli taluk

ಗ್ರಾಮ ಪಂಚಾಯಿತಿಯೊಂದರ​ ಪಿಡಿಒ ಒಬ್ಬರು ಜಮೀನು ಎನ್​ಎಗಾಗಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ .

acb raid in kampli
ಎಸಿಬಿ ಬಲೆಗೆ ಬಿದ್ದ ಕಂಪ್ಲಿಯ ಗ್ರಾಮ ಪಂಚಾಯತ್​ ಪಿಡಿಒ
author img

By

Published : Jul 1, 2022, 10:00 AM IST

ಬಳ್ಳಾರಿ: ಕಂಪ್ಲಿ ತಾಲೂಕಿನಲ್ಲಿ ಕೃಷಿ ಜಮೀನು ಬದಲಾವಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್​ ಪಿಡಿಒ ಹಾಗೂ ಸಂಗಡಿಗರು ವ್ಯಕ್ತಿಯೊಬ್ಬರಿಗೆ 25 ಸಾವಿರ ರೂಪಾಯಿ ಲಂಚ ಬೇಡಿಕೆಯಿಟ್ಟಿದ್ದರು. ಅದರಂತೆ ಎಪಿಎಂಸಿ ಹತ್ತಿರದ ಕಟ್ಟಡದಲ್ಲಿ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪಿಡಿಒ ಸೇರಿದಂತೆ ಮೂವರು ಸಂಗಡಿರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಪಟ್ಟಣದ ನಿವಾಸಿ ನಾರಾಯಣಸ್ವಾಮಿ ಎನ್ನುವವರು ಮುದ್ದಾಪುರ ಗ್ರಾ.ಪಂ. ವ್ಯಾಪ್ತಿಯ ತಮ್ಮ ಜಮೀನನ್ನು NA ಮಾಡಿಕೊಡಲು ಅರ್ಜಿ ಸಲ್ಲಿಸಿದ್ದು, ಅರ್ಜಿ ಇತ್ಯರ್ಥಕ್ಕೆ ಪಿಡಿಒ ಹಾಗೂ ಗ್ರಾ.ಪಂ ಸದಸ್ಯನೊಡನೆ ಸೇರಿ 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.

ಸಂಜೆ ವೇಳೆ ನಾರಾಯಣಸ್ವಾಮಿ ಮಳಗಿಯಲ್ಲಿ 20 ಸಾವಿರ ನಗದು ಹಣ ತೆಗೆದುಕೊಳ್ಳುವಾಗ ಬಳ್ಳಾರಿ ವಲಯದ ಎಸ್ಪಿ ಹರಿಬಾಬು ನೇತೃತ್ವದಲ್ಲಿ ಡಿವೈಎಸ್ಪಿ ವಿ.ಸೂರ್ಯನಾರಾಯಣರಾವ್​, ಪಿಐ ಪ್ರಭುಲಿಂಗಯ್ಯಸ್ವಾಮಿ ಹಿರೇಮಠ ಮತ್ತು ಸಿಬ್ಬಂದಿ ದಾಳಿ ಮಾಡಿದ್ದರು. ಗ್ರಾಮ ಪಂಚಾಯಿತಿ ಪಿಡಿಒ ಬೀರಲಿಂಗ, ಗ್ರಾ.ಪಂ ಸದಸ್ಯ ಬಳ್ಳಾರಿ ಮಾಧವ ಮತ್ತು ಭೀಮೇಶ ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬಾಲಕನ ಮೇಲೆ ಲೈಂಗಿಕ ದೌಜ್ಯನ್ಯ.. ಮದರಸಾ​ ಶಿಕ್ಷಕನಿಗೆ 67 ವರ್ಷ ಶಿಕ್ಷೆ ನೀಡಿದ ಕೋರ್ಟ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.