ಬಳ್ಳಾರಿ: ಶ್ರಾವಣ ಶುಕ್ರವಾರದ ನಿಮಿತ್ತ ಇಲ್ಲಿನ ಕನಕದುರ್ಗಮ್ಮ ದೇಗುಲದಲ್ಲಿಂದು ಪೂರ್ಣಕುಂಭ ಹಾಗೂ ಕಳಸಾರೋಹಣ ಸಂಭ್ರಮದಲ್ಲಿ ಸಚಿವ ಶ್ರೀರಾಮುಲು ಅನುಪಸ್ಥಿತಿ ವೈಯಕ್ತಿಕವಾಗಿ ಬೇಸರ ತಂದಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿಯ ಕನಕದುರ್ಗಮ್ಮ ದೇಗುಲದಲ್ಲಿಂದು ಹೋಮ,ಹವನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಕನಕದುರ್ಗಮ್ಮ ದೇಗುಲಕ್ಕೆ ಅವಿರತ ಸೇವೆ ಮಾಡಿದ್ದಾರೆ. ಅವರು ಬಳ್ಳಾರಿಯಿಂದ ದೂರ ಇರುವುದು ಬೇಸರ ತಂದಿದೆ ಎಂದು ಸೋಮಶೇಖರ ರೆಡ್ಡಿ ತಿಳಿಸಿದರು.