ಬಳ್ಳಾರಿ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮತ್ತು ಸೋಂಕಿಗೆ ಒಳಗಾಗಿರುವವರ ರಕ್ಷಣೆಗೆ ಸರ್ಕಾರದ ಜೊತೆ ಜೆಎಸ್ಡಬ್ಲ್ಯು ಗ್ರೂಪ್ ಸಂಸ್ಥೆ ಕೈಜೋಡಿಸಿದ್ದು,ಪಿಎಂ ಕೇರ್ಸ್ ನಿಧಿಗೆ 100 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದೆ.
ಸಂಸ್ಥೆಯ ಪ್ರತಿಯೊಬ್ಬ ಉದ್ಯೋಗಿಯು ತಮ್ಮ ಒಂದು ದಿನದ ಸಂಬಳವನ್ನು ‘ಪಿಎಂ ಕೇರ್ಸ್’ ನಿಧಿಗೆ ನೀಡಲು ನಿರ್ಧಿಸಿದ್ದು, ಉಳಿದ ಉದ್ಯೋಗಿಗಳು ಸ್ವಯಂ ಪ್ರೇರಣೆಯಿಂದ ನೆರವು ನೀಡಲು ಮುಂದಾಗಿದ್ದಾರೆ. ಜೆಎಸ್ಡಬ್ಲ್ಯೂ ಗ್ರೂಪ್ನ ಸುತ್ತಮುತ್ತ ವಾಸಿಸುವ ಸಮುದಾಯಗಳಿಗೆ ಸಂಸ್ಥೆಯು ಅಗತ್ಯ ಆಹಾರ ಪೂರೈಸಲು ನಿರ್ಧರಿಸಿದೆ.
ಸಮುದಾಯ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಅಧಿಕ ವೈದ್ಯಕೀಯ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ನಿರಂತರ ಪರಿಸ್ಥಿತಿ ಮೌಲ್ಯಮಾಪನವನ್ನು ನಾವು ನಡೆಸುತ್ತಿದ್ದು, ಕೊರೊನಾವನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲಾ ಸಹಕಾರವನ್ನು ಸರ್ಕಾರಕ್ಕೆ ನೀಡಲು ನಾವು ಬದ್ಧವಾಗಿದ್ದೇವೆ. ಈ ತುರ್ತು ಸಂದರ್ಭಕ್ಕೆ ಅಗತ್ಯವಿರುವ ತಾತ್ಕಾಲಿಕ ನೆರವು ಇದಾಗಿದ್ದು, ಭವಿಷ್ಯದಲ್ಲಿ ಎಲ್ಲಾ ಸಾಮಾಜಿಕ ಅವಶ್ಯಕತೆಗಳಿಗೆ ಕ್ರಿಯಾತ್ಮಕವಾಗಿ ಪ್ರತಿಕ್ರಿಯಿಸಲು ನಾವು ಮತ್ತಷ್ಟು ಆರ್ಥಿಕ ಮತ್ತು ಇನ್ನಿತರ ಸಹಕಾರವನ್ನು ಒದಗಿಸಲು ಸಿದ್ಧವಾಗಿದ್ದೇವೆ ಎಂದು ಜೆಎಸ್ಡಬ್ಲ್ಯು ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದರು.