ETV Bharat / state

ಪತ್ರಕರ್ತರು ಸರ್ಕಾರಿ ಸೌಲಭ್ಯ ಸದ್ಭಳಿಕೆ ಮಾಡಿಕೊಳ್ಳಲಿ: ಪತ್ರಕರ್ತ ಬಿ.ಎಂ. ಹನೀಫ

author img

By

Published : Jul 8, 2019, 8:55 AM IST

ಶಿಕ್ಷಕ ಹಾಗೂ ಪತ್ರಕರ್ತರ ಹುದ್ದೆಗಳು ಕೃತಜ್ಞತೆಯಿಂದ ಕೂಡಿವೆ. ಅವರು ಮೌಲ್ಯಗಳೊಂದಿಗೆ ಬದ್ಧರಾಗಿರಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತ ಬಿ.ಎಂ. ಹನೀಫ ಸಲಹೆ ನೀಡಿದರು.

ಪತ್ರಕರ್ತ ಬಿ.ಎಂ.ಹನೀಫ

ಬಳ್ಳಾರಿ: ಹೊಸಪೇಟೆ ನಗರದ ಹೊರವಲಯದಲ್ಲಿರುವ ಗುಂಡಾ ಸಸ್ಯ ಉದ್ಯಾನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ, ಪ್ರಸ್ತುತ ಪತ್ರಿಕೋದ್ಯಮ ಎದುರಿಸುತ್ತಿರುವ ಬಿಕ್ಕಟ್ಟು ಕುರಿತು ಹಿರಿಯ ಪತ್ರಕರ್ತ ಬಿ.ಎಂ.ಹನೀಫ ಉಪನ್ಯಾಸ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹನೀಫ್​​ ಅವರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಕೇವಲ ಆಶ್ವಾಸನೆ ನೀಡಿದರೆ ಸಾಲದು, ಅವುಗಳನ್ನು ಈಡೇರಿಸಬೇಕು. ಬಸವಣ್ಣನವರು ವಚನ ಮೂಲಕ ಕನ್ನಡದ ಮೆರಗನ್ನು ಹೆಚ್ಚಿಸಿದ್ದರು. ಶಿಶುನಾಶ ಶರೀಫ್ ಜೀವನ ಹೇಗೆ ಮುನ್ನಡೆಸಬೇಕು ಎಂಬುದನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ತತ್ವ ಪದಗಳ ಮೂಲಕ ತಿಳಿಸಿದರು. ಶಿಕ್ಷಕ ಹಾಗೂ ಪತ್ರಕರ್ತರ ಹುದ್ದೆಗಳು ಕೃತಜ್ಞತೆಯಿಂದ ಕೂಡಿವೆ. ಅವರು ಮೌಲ್ಯಗಳಿಗೆ ಬದ್ಧರಾಗಿರಬೇಕಾಗುತ್ತದೆ. ವೈಯಕ್ತಿಕ ನಿಲುವುಗಳನ್ನು ಬದಿಗೊತ್ತಿ ಸಮಾಜದ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತರು ಮೌಲ್ಯಗಳಿಗೆ ಬದ್ಧರಾಗಿರಬೇಕಾಗುತ್ತದೆ

ಶಾಸಕ ಆನಂದ್​ ಸಿಂಗ್ ಮಾತನಾಡಿ, ಸಮಾಜವನ್ನು ಸರಿದಾರಿಯಲ್ಲಿ ನಡೆಸುವಂತ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಅದನ್ನು ಸರಿಯಾಗಿ ನಿಭಾಯಿಸಬೇಕು. ಸೈನಿಕರು ದೇಶದ ಗಡಿಯನ್ನು ರಕ್ಷಣೆ ಮಾಡುತ್ತಾರೆ. ಆದರೆ, ಪತ್ರಕರ್ತರು ದೇಶದ ಒಳಗಿನ ಸಮಾಜವನ್ನು ಕಾಯುವ ಸೈನಿಕರು. ಹೊಗಳಿಕೆ ಮತ್ತು ತೆಗಳಿಕೆಯನ್ನು ಸಮಾನವಾಗಿ ಸ್ವೀಕರಿಸಬೇಕು. ಪತ್ರಕರ್ತರಿಗೆ ನಿವೇಶನ ನೀಡಲು ಅಗತ್ಯ ಸಹಕಾರವನ್ನು ನೀಡಲಾಗುವುದು ಎಂದು ಹೇಳಿದರು.

Intro:ಪತ್ರಕರ್ತರು ಸರ್ಕಾರಿ ಸೌಲಭ್ಯ ಸದ್ಭಳಿಕೆ ಮಾಡಿಕೊಳ್ಳಲಿ!
ಬಳ್ಳಾರಿ: ಪತ್ರಕರ್ತರು ಸರ್ಕಾರಿ ಸೌಲಭ್ಯವನ್ನು ಸದ್ಭಳಕೆ ಮಾಡಿ ಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಬಿ.ಎಂ.ಹನೀಫ ಹೇಳಿ ದರು.
ಜಿಲ್ಲೆಯ ಹೊಸಪೇಟೆ ನಗರ ಹೊರವಲಯದಲ್ಲಿರುವ ಗುಂಡಾ ಸಸ್ಯ ಉದ್ಯಾನದಲ್ಲಿಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕವು ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಯಲ್ಲಿ ಪ್ರಸ್ತುತ ಪತ್ರಿಕೋದ್ಯಮ ಎದುರಿಸುತ್ತಿರುವ ಬಿಕ್ಕಟ್ಟು ಕುರಿತು ಉಪನ್ಯಾಸ ನೀಡಿದರು.
ಸಮಾಜದ ಓರೆ ಮತ್ತು ಕೊರೆ ತಿದ್ದುವ ಕೆಲಸ ಪತ್ರಕರ್ತರದ್ದು. ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಕೇವಲ ಆಶ್ವಾಸನೆ ನೀಡಿ
ದರೆ ಸಾಲದು. ಅವುಗಳನ್ನು ಈಡೇರಿಸಬೇಕು ಎಂದರು.
ಬಸವಣ್ಣನವರು ವಚನ ಮೂಲಕ ಕನ್ನಡ ಮೆರಗನ್ನು ತಂದರು. ಪಂಚಾಂಗಕ್ಕೆ 12ನೇ ಶತಮಾನದಲ್ಲಿ ವಿದಾಯ ಹೇಳಿಸಿದರು. ಇನ್ನು ಶಿಶುನಾಶ ಶರೀಫ್ ಜೀವನ ಹೇಗೆ ಮುನ್ನಡೆಸಬೇಕು ಎಂಬುದನ್ನು ಜನ ಅರ್ಥವಾಗುವ ರೀತಿಯಲ್ಲಿ ತತ್ವಪದಗಳನ್ನು ಹಾಡಿನ ಮೂಲಕ ತಿಳಿಸಿದರು.
ಶಿಕ್ಷಕ ಹಾಗೂ ಪತ್ರಕರ್ತರ ಹುದ್ದೆಗಳು ಕೃತಜ್ಞತೆಯಿಂದ ಕೂಡಿವೆ. ಅವರು ಮೌಲ್ಯಗಳೊಂದಿಗೆ ಬದ್ಧರಾಗಿರಬೇಕಾಗುತ್ತದೆ. ವೈಯಕ್ತಿಕ ನಿಲುವುಗಳನ್ನು ಒದಿಗೊತ್ತಿ ಸಮಾಜದ ಪ್ರಜ್ಞೆಯನ್ನು ರೂಡಿಸಿ ಕೊಳ್ಳಬೇಕು. ಎಂದು ಹೇಳಿದರು.
ಶಾಸಕ ಆನಂದಸಿಂಗ್ ಮಾತನಾಡಿ, ಬ್ರೇಕಿಂಗ್ ಸುದ್ದಿಯಿಂದ ಮಾಧ್ಯಮಗಳು ಹೊರಗಡೆ ಬರಬೇಕು. ವಾಸ್ತವ ಸುದ್ದಿಗಳನ್ನು ಬಿತ್ತರಿಸಬೇಕು. ಸಮಾಜವನ್ನು ಸರಿದಾರಿಯಲ್ಲಿ ನಡೆಸುವಂತ ಜವಾಬ್ದಾರಿ ಅವರ ಮೇಲಿದೆ. ಅವರು ಅದನ್ನು ಸರಿಯಾಗಿ ನಿಭಾಯಿಸಬೇಕು ಎಂದು ಹೇಳಿದರು.
Body:ಸೈನಿಕರು ದೇಶದ ಗಡಿಯನ್ನು ರಕ್ಷಣೆ ಮಾಡುತ್ತಾರೆ. ಆದರೆ, ಪತ್ರಕರ್ತರು ದೇಶದ ಒಳಗಿನ ಸಮಾಜವನ್ನು ಕಾಯುವ ಸೈನಿಕರು. ಹೊಗಳಿಕೆ ಮತ್ತು ತೆಗಳಿಕೆಯನ್ನು ಸಮಾನವಾಗಿ ಸ್ವೀಕರಿಸಬೇಕು. ಪತ್ರಕರ್ತರಿಗೆ ನಿವೇಶನ ನೀಡಲು ಅಗತ್ಯ ಸಹಕಾರವನ್ನು ನೀಡಲಾಗುವುದು ಎಂದು ಹೇಳಿದರು.
ಸಂಸದ ವೈ.ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಅವರು ಮಾತನಾಡಿ, ಪತ್ರಕರ್ತರು ಜನಪ್ರತಿನಿಧಿಗಳಿಗೆ ಅಂಕುಶ ವನ್ನು ಹಾಕಬೇಕು. ಆಗ ಅವರು ಎಚ್ಚರಿಕೆಯಿಂದ ಇರುತ್ತಾರೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಸಹಕರಿಸಲಾಗುವುದು. ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಹಾಗೂ ವಸತಿ ಸೌಲಭ್ಯಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_HOSAPETE_PATHRIKA_DINCHARANE_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.