ಕರ್ನಾಟಕ ಹಾಲು ಉತ್ಪಾದಕ ಸಂಘದ ರಾಯಚೂರು, ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ವಿವಿಧ ವೃಂದದಲ್ಲಿ ಖಾಲಿ ಇರುವ ಒಟ್ಟು 64 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆ ಕುರಿತ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಕೆಎಂಎಫ್ ಆರ್ಬಿಕೆಎಂಯುಎಲ್ನಲ್ಲಿ ಖಾಲಿ ಇರುವ ಹುದ್ದೆಗಳು ಇಂತಿವೆ.
ಉಪ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು, ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧಿಕಾರಿ, ಲೆಕ್ಕಾಧಿಕಾರಿ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಉಗ್ರಾಣ ಅಧಿಕಾರಿ, ಮಾರುಕಟ್ಟೆ ಸಹಾಯಕ ದರ್ಜೆ, ಜೂನಿಯರ್ ಸಿಸ್ಟಂ ಆಪರೇಟರ್, ಆಡಳಿತ ಸಹಾಯಕ ದರ್ಜೆ, ಚಾಲಕರು ಸೇರಿದಂತೆ ಒಟ್ಟು 64 ಹುದ್ದೆಗಳ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ಪದವಿಯನ್ನು ಹೊಂದಿರಬೇಕಿದೆ. ಜೊತೆಗೆ ಸಾಮಾನ್ಯ ಕಂಪ್ಯೂಟರ್ ಜ್ಞಾನದ ಅನುಭವ ಇರಬೇಕು.
ವೇತನ: ವಿವಿಧ ಹುದ್ದೆಗಳಿಗೆ ಅನುಸಾರವಾಗಿ ವೇತನ ನಿಗದಿಸಲಾಗಿದ್ದು, ಕನಿಷ್ಠ 21,400 ರಿಂದ ಗರಿಷ್ಠ 99600 ರೂ. ಮಾಸಿಕ ವೇತನ ಹುದ್ದೆಗೆ ಅನುಗುಣವಾಗಿ ನಿಗದಿಸಲಾಗಿದೆ.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು. ಪ್ರವರ್ಗ 1, ಪ.ಜಾ, ಪ. ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ.ಜಾ, ಪ.ಪಂ, ಪ್ರವರ್ಗ 1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ಮತ್ತು ಇತರೆ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಭರ್ತಿ ಮಾಡಬೇಕಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು
ಈ ಹುದ್ದೆಗೆ ನವೆಂಬರ್ 7 ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್ 7 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು rbkmul.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: ಐಐಎಸ್ಸಿಯಲ್ಲಿ ಲೈಬ್ರರಿಯನ್ ಹುದ್ದೆ ನೇಮಕಾತಿ; ಇಲ್ಲಿದೆ ಸಂಪೂರ್ಣ ಮಾಹಿತಿ