ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಮಹಿಳಾ ಸಬಲೀಕರಣದ ಭಾಗವಾಗಿ ಗ್ರಾಮೀಣ ಭಾಗದ ಯುವತಿಯರನ್ನ ಗುರುತಿಸಿ ನರ್ಸಿಂಗ್ ತರಬೇತಿ ನೀಡಿ ಹಿರಿಯ ನಾಗರಿಕರ ಆರೈಕೆಯ ಕುರಿತು ತರಬೇತಿ ನೀಡಿ ಪ್ರಮಾಣ ಪತ್ರ ಕೊಡಲಾಗುತ್ತದೆ.
ಜಿಲ್ಲೆಯ ಸಂಡೂರು ತಾಲೂಕಿನ ನಾನಾ ಗ್ರಾಮೀಣ ಪ್ರದೇಶಗಳಲ್ಲಿ 8ನೇ ತರಗತಿ, ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣರಾದ ಯುವತಿಯರಿಗೆ ಬ್ಯೂಟಿಷಿಯನ್, ಹಿರಿಯ ನಾಗರಿಕರ ಹಾಗೂ ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದವರ ರಕ್ಷಣೆ ಯಾವ ರೀತಿ ಮಾಡಬೇಕೆಂಬುದು ಸೇರಿದಂತೆ ಇನ್ನಿತರೆ ತರಬೇತಿ ನೀಡಿ ಪ್ರಮಾಣ ಪತ್ರ ನೀಡಲಾಗುತ್ತೆ.
ಶಂಕರಗುಡ್ದದ ವಿದ್ಯಾನಗರದಲ್ಲಿರುವ ಉಭಯ ಶಕ್ತಿ ಕೇಂದ್ರದಲ್ಲಿ ಕಂಪ್ಯೂಟರ್ ತರಬೇತಿಯೊಂದಿಗೆ ಇನ್ವಾಯಿಸ್, ಡಾಟಾ ಎಂಟ್ರಿ ಸೇರಿದಂತೆ ಇನ್ನಿತರೆ ತರಬೇತಿಯನ್ನು ಇಲ್ಲಿ ಕೊಡಲಾಗುತ್ತಿದೆ. ಈವರೆಗೂ ಅಂದಾಜು 2,700ಕ್ಕೂ ಹೆಚ್ಚು ಮಹಿಳೆಯರು ಇಲ್ಲಿ ತರಬೇತಿ ಪಡೆದು ಜಿಂದಾಲ್ ಸಮೂಹ ಸಂಸ್ಥೆಯ ನಾನಾ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿತ್ತಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ ಕುರೇಕುಪ್ಪ, ಭುವನಹಳ್ಳಿ, ಗಾದಿಗನೂರು, ವಡ್ಡು, ಬಸಾಪುರ, ತೋರಣಗಲ್ಲು, ತಾಳೂರು, ಜೋಗ, ವಿಠ್ಲಾಪುರ, ಸಂಡೂರು, ತಾರಾನಗರ, ಬಳ್ಳಾರಿ ಮತ್ತು ಹೊಸಪೇಟೆ ನಗರದ ಯುವತಿಯರು ಈ ಗರಡಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.