ETV Bharat / state

ಬಲಿಗಾಗಿ ಕಾಯ್ದು ಕುಳಿತ ಹಳೇ ಶಾಲಾ ಕಟ್ಟಡ... ನೆಲಸಮ ಮಾಡಲು ಮುಂದಾಗದ ಶಿಕ್ಷಣ ಇಲಾಖೆ! - kannada news

ಶಿಕ್ಷಣ ಇಲಾಖೆಯು ಶಿಥಿಲಗೊಂಡ ಸರ್ಕಾರಿ ಶಾಲೆಯಲ್ಲಿನ ತರಗತಿ ಕೊಠಡಿಯನ್ನು ಕೆಡವಲು ಅಗತ್ಯಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಶಿಥಿಲಾವ್ಯಸ್ಥೆಗೆ ತಲುಪಿದ ತರಗತಿ ಕೊಠಡಿ
author img

By

Published : May 7, 2019, 6:23 AM IST

ಬಳ್ಳಾರಿ : ಅದು 300 ಕ್ಕೂ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡೋ ಶಾಲಾ ಕಟ್ಟಡ. ಶಿಥಿಲಾವಸ್ಥೆಗೆ ಬಂದಿದ್ದರಿಂದ ಅದನ್ನ ಬಿಟ್ಟು ಪಕ್ಕದಲ್ಲೇ ಹೊಸ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಆದರೆ ಹಳೇ ಕಟ್ಟಡವನ್ನ ಮಾತ್ರ ನೆಲಸಮ ಮಾಡದೆ ಹಾಗೆ ಬಿಟ್ಟಿದ್ದು, ಯಾವಾಗ ಬೀಳುತ್ತೋ ಗೊತ್ತಿಲ್ಲದ್ದಂತಾಗಿದೆ.

ಜಿಲ್ಲೆಯ ಜಾನೇಕುಂಟೆ ಗ್ರಾಮದ ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಸರಿ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯ ಒಂದು ಭಾಗದಲ್ಲಿ ಹೊಸದಾಗಿ ತರಗತಿ ಕೊಠಡಿಗಳನ್ನ ನಿರ್ಮಿಸಲಾಗಿದೆಯಾದ್ರೂ, ಶಿಥಿಲಾವ್ಯಸ್ಥೆಗೆ ತಲುಪಿದ ತರಗತಿ ಕೊಠಡಿ ಕೆಡವಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗುತ್ತಿಲ್ಲ ಎಂದು ಜಾನೇಕುಂಟೆ ಗ್ರಾಮಸ್ಥರು ದೂರಿದ್ದಾರೆ.

ಈ ಶಾಲೆಯ ಶಿಥಿಲಗೊಂಡ ತರಗತಿ ಕೊಠಡಿಯೊಳಗೆ ವಿದ್ಯಾರ್ಥಿಗಳು ಆಟವಾಡುತ್ತಿದ್ದಾರೆ.‌ ಅದರಿಂದ ಕೊಠಡಿಯ ಗುಣಮಟ್ಟದ ಪ್ರಶ್ನೆಯೂ ಉದ್ಭವಿಸುತ್ತದೆ. ಹೀಗಾಗಿ, ಶಿಕ್ಷಣ ಇಲಾಖೆಯು ಶಿಥಿಲಗೊಂಡ ಸರ್ಕಾರಿ ಶಾಲೆಯಲ್ಲಿನ ಈ ತರಗತಿ ಕೊಠಡಿಯನ್ನು ಕೆಡವಲು ಅಗತ್ಯಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಶಿಥಿಲಾವ್ಯಸ್ಥೆಗೆ ತಲುಪಿದ ತರಗತಿ ಕೊಠಡಿ

ಶೌಚಾಲಯದಲ್ಲೇ ಕಸದರಾಶಿ

ಜಾನೇಕುಂಟೆ ತಾಂಡಾದ ಸರ್ಕಾರಿ ಶಾಲೆಯ ಆವರಣದಲ್ಲಿ ಶೌಚಾಲಯವಿದೆ. ಆ ಶೌಚಾಲಯದಲ್ಲಿ ಕಸದರಾಶಿ ತುಂಬಿಕೊಂಡು ಗಬ್ಬೆಂದು ನಾರುತ್ತಿದೆ. ಬಳಕೆಗೆ ಯೋಗ್ಯವಲ್ಲದಿದ್ದರೂ, ವಿದ್ಯಾರ್ಥಿ‌ನಿಯರು ಆ ಶೌಚಗೃಹವನ್ನು ಬಳಕೆ ಮಾಡುತ್ತಿದ್ದಾರೆ. ಅದರಿಂದ ಸಾಂಕ್ರಮಿಕ ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಂತಿದೆ. ಕೂಡಲೇ ಶೌಚಗೃಹದ ಡೆಮಾಲಿಸ್​ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವೀರಶೈವ ಕಾಲೇಜು ಸಹಾಯಹಸ್ತ

ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವೀರಶೈವ ಕಾಲೇಜಿನ ಎನ್.ಎಸ್.ಎಸ್ ತಂಡದ ಮುಖ್ಯಸ್ಥ ಜಗದೀಶ ನೇತೃತ್ವದ ತಂಡ ಭೇಟಿ ನೀಡಿ, ಸರ್ಕಾರಿ ಶಾಲೆಯ ಶೌಚಗೃಹ‌ ನಿರ್ಮಾಣ ಸೇರಿದಂತೆ ಇತರೆ ಚಟುವಟಿಕೆಗೆ ಸಹಾಯಹಸ್ತ ನೀಡುವುದಾಗಿ ಭರವಸೆ ನೀಡಿದ್ದಾರೆ.

Intro:ಗಣಿನಾಡಿನಲ್ಲಿ‌‌‌ ಸರ್ಕಾರಿ ಶಾಲೆಗಳ ಹರೋಹರಾ…
ಜಾನೇಕುಂಟೆ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಯಿದು!
ಬಳ್ಳಾರಿ: ಅದು ಮಣ್ಣಿನ‌ ಇಟ್ಟಿಗೆಯಿಂದ ತಲೆಎತ್ತಿಯಾದ್ರೂ
ಸುಣ್ಣ, ಬಣ್ಣದ ಲೇಪನವೇ ಇಲ್ಲಾಂದ್ರೂ ಕೂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದರ ತರಗತಿ ಕೊಠಡಿಯಿದು..!
ಅರ್ರೇರೇ ಇದೇನಪ್ಪಾ ಸರ್ಕಾರಿ ಶಾಲೆಯ ಕೊಠಡಿ ಹೀಗಿದೆಯಾ ಅಂತಾ ಗಾಬರಿಯಾಗಬೇಡಿ.‌ ಇಷ್ಟೊಂದು ಖರಾಬ್ ಆಗಿರುವ ಸರ್ಕಾರಿ ಶಾಲೆಯ ತರಗತಿ ಕೊಠಡಿ ಇರುತ್ತಾ ಎಂದು ಹುಬ್ಬೇರಿಸ ಬೇಡಿ.
ಹೌದು, ಅಕ್ಷರಶಃ ಈ ಶಾಲೆಯ ತರಗತಿ ಕೊಠಡಿ ಶಿಥಿಲ ಗೊಂಡಂತಿದೆ. ತರಗತಿ ಕೊಠಡಿಯೊಳಗಿನ ಮೇಲ್ಛಾವಣೆ‌ ಮೇಲ್ಪದರು ಉದಿರಿ ಬಿಡುತ್ತದೆ. ಕಬ್ಬಿಣದ ಸರಳುಗಳು ನೋಡುಗರ ಕಣ್ಣಿಗೆ ಗೋಚರಿಸುತ್ತಿವೆ.‌
ಒಂದರಿಂದ ಎಂಟನೇ ತರಗತಿವರೆಗೆ ಈ ಶಾಲೆಯಲ್ಲಿ
ಸರಿ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯ ಒಂದು ಭಾಗದಲ್ಲಿ ಹೊಸದಾಗಿ ತರಗತಿ ಕೊಠಡಿಗಳನ್ನ ನಿರ್ಮಿಸಲಾಗಿದೆಯಾದ್ರೂ, ಶಿಥಿಲಾವ್ಯಸ್ಥೆಗೆ ತಲುಪಿದ ತರಗತಿ ಕೊಠಡಿಗಳ‌‌ ಕೆಡವಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾ ಗುತ್ತಿಲ್ಲ ಎಂದು ಜಾನೇಕುಂಟೆ ಗ್ರಾಮಸ್ಥರು ದೂರಿದ್ದಾರೆ.
ಈ ಶಾಲೆಯ ಶಿಥಿಲಗೊಂಡ ತರಗತಿ ಕೊಠಡಿಯೊಳಗೆ ವಿದ್ಯಾರ್ಥಿಗಳು ಆಟವಾಡುತ್ತಿದ್ದಾರೆ.‌ ಅದರಿಂದ ಕೊಠಡಿಯ ಗುಣಮಟ್ಟದ ಪ್ರಶ್ನೆಯೂ ಉದ್ಭವಿಸುತ್ತದೆ. ಹೀಗಾಗಿ, ಶಿಕ್ಷಣ ಇಲಾಖೆಯು ಶಿಥಿಲಗೊಂಡ ಸರ್ಕಾರಿ ಶಾಲೆಯಲ್ಲಿನ ಈ ತರಗತಿ ಕೊಠಡಿಯನ್ನು ಕೆಡವಲು ಅಗತ್ಯಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
Body:ಶೌಚಾಲಯದಲ್ಲೇ ಕಸದರಾಶಿ: ಜಾನೇಕುಂಟೆ ತಾಂಡಾದ ಸರ್ಕಾರಿ ಶಾಲೆಯ ಆವರಣದಲ್ಲಿ ಶೌಚಾಲಯವಿದೆ. ಆ ಶೌಚಾಲಯದಲ್ಲಿ ಕಸದರಾಶಿ ತುಂಬಿಕೊಂಡು ಗಬ್ಬೆಂದು ನಾರುತ್ತಿದೆ. ಬಳಕೆ ಯೋಗ್ಯ ವಲ್ಲದಿದ್ದರೂ, ವಿದ್ಯಾರ್ಥಿ‌ನಿಯರು ಆ ಶೌಚಗೃಹವನ್ನು ಬಳಕೆ ಮಾಡುತ್ತಿದ್ದಾರೆ. ಅದರಿಂದ ಸಾಂಕ್ರಾಮಿಕ ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಂತಿದೆ. ಕೂಡಲೇ ಶೌಚಗೃಹದ ಡೆಮಾಲಿಸ್ ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವೀರಶೈವ ಕಾಲೇಜು ಸಹಾಯಹಸ್ತ: ಜಾನೇಕುಂಟೆ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವೀರಶೈವ ಕಾಲೇಜಿನ ಎನ್ ಎಸ್ ಎಸ್ ತಂಡದ ಮುಖ್ಯಸ್ಥ ಜಗದೀಶ ನೇತೃತ್ವದ ತಂಡ ಭೇಟಿ ನೀಡಿ, ಸರ್ಕಾರಿ ಶಾಲೆಯ ಶೌಚಗೃಹ‌ ನಿರ್ಮಾಣ ಸೇರಿದಂತೆ ಇತರೆ ಚಟುವಟಿಕೆಗೆ ಸಹಾಯಹಸ್ತ ನೀಡುವುದಾಗಿ ಭರವಸೆ ನೀಡಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_06_BALLARI_RURAL_GOVT_SCH_NOT_GOOD_7203310

KN_BLY_02a_06_BALLARI_RURAL_GOVT_SCH_NOT_GOOD_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.