ಬಳ್ಳಾರಿ : ಇಂದು ಗ್ರಾಮ ಪಂಚಾಯತ್ ಚುನಾವಣೆಗೆ 2ನೇ ಹಂತದ ಮತದಾನ ನಡೆಯುತ್ತಿದೆ. ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಅಂತಾರಾಜ್ಯ ಯುವತಿಯೊಬ್ಬಳು ಮೊದಲ ಬಾರಿಗೆ ಮತದಾನ ಮಾಡಿ ಗಮನ ಸೆಳೆದಿದ್ದಾರೆ.
ಓದಿ: ಮಹದೇವಪುರ : ಗ್ರಾಮ ಪಂಚಾಯತ್ ಚುನಾವಣೆ ವೇಳೆ ಲಾಠಿಚಾರ್ಜ್
ಛತ್ತೀಸ್ಗಢ ಮೂಲದ ರಿಯಾ ತಿವಾರಿ ಎಂಬ ಯುವತಿ ವಡ್ಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಗೆ ತೆರಳಿ ತಮ್ಮ ಮತದಾನದ ಹಕ್ಕನ್ನ ಚಲಾಯಿಸಿದ್ದಾರೆ. ಯುವತಿಯ ತಂದೆ ರಮೇಶ್ ತಿವಾರಿ ಎಂಬುವರು ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ.