ETV Bharat / state

ಪವಿತ್ರ ರಂಜಾನ್​ ಸಂಭ್ರಮ... ಗಣಿನಾಡಲ್ಲೂ ಹಲೀಂ ಖಾದ್ಯಕ್ಕೆ ಹೆಚ್ಚಿದ ಬೇಡಿಕೆ! - undefined

ಹಲೀಂ ಖಾದ್ಯಕ್ಕೂ ಮುಸ್ಲಿಂ ಧರ್ಮೀಯರ ರಂಜಾನ್ ಹಬ್ಬಕ್ಕೂ ಅವಿನಾಭಾವ ಸಂಬಂಧವಿದ್ದಂತೆ ಕಾಣುತ್ತದೆ. ವಿಶೇಷವಾಗಿ ರಂಜಾನ್ ಹಬ್ಬದ ಸಂದರ್ಭದಲ್ಲೇ ಈ ಖಾದ್ಯದ ಘಮಲು ಹೆಚ್ಚು.

ಹಲೀಂ ಖಾದ್ಯ
author img

By

Published : May 27, 2019, 12:17 PM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಮುಸ್ಲಿಂ ಧರ್ಮೀಯರ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಎಲ್ಲೆಡೆ ಪಸರಿಸಿದೆ. ಅದರಲ್ಲೂ ಅರೇಬಿಯನ್ ಚಿಕನ್ ಹಲೀಂ ಗೂ (ಹೈದರಾಬಾದಿನಲ್ಲಿ ಖ್ಯಾತಿ ಹೊಂದಿರುವ ಹಲೀಂ) ಎಲ್ಲಿಲ್ಲದ ಬಹುಬೇಡಿಕೆ ಶುರುವಾಗಿದೆ.

ಬಳ್ಳಾರಿಯಲ್ಲಿ ಘಮಗುಟ್ಟಿದ ಹಲೀಂ ಖಾದ್ಯ

ಹೌದು, ನೀವು ಕೂಡ ಚಿಕನ್ ಹಲೀಂ ಖಾದ್ಯದ ಸವಿರುಚಿ ನೋಡಬೇಕಾ. ಹಾಗಾದ್ರೆ ಒಮ್ಮೆ ಬಳ್ಳಾರಿ ನಗರದ ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಜೀಮ್ ಫಾಸ್ಟ್ ಫುಡ್ ಅಂಗಡಿ ಮಳಿಗೆಗೆ ಭೇಟಿ ಕೊಡಿ. ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯಲ್ಲಿ ಸಂಜೆಯೊತ್ತಿಗೆ ಒಮ್ಮೆ ಸಂಚರಿಸಿದರೆ ಸಾಕು. ಎಲ್ಲೆಡೆಯೂ ಚಿಕನ್ ಹಲೀಂ ಖಾದ್ಯದ ಘಮಲು ನಿಮ್ಮ ಮೂಗಿಗೆ ಬಡಿಯುತ್ತದೆ. ಅದರ ಸುಗಂಧದ ವಾಸನೆಯ ಜಾಡು ಹಿಡಿದು ಅಜೀಮ್ ಫಾಸ್ಟ್ ಫುಡ್ ಸೆಂಟರ್ ನತ್ತ ಹೊರಟವರೇ ಹೆಚ್ಚು.

ರಂಜಾನ್ ಹಬ್ಬ ಶುರುವಾದಾಗಿಂದಲೂ ಮುಸ್ಲಿಂಮರು ವ್ರತಾಚರಣೆ ಪ್ರಾರಂಭಿಸುತ್ತಾರೆ. ವ್ರತನಿಷ್ಠ ಮುಸ್ಲಿಂಮರು ಸಂಜೆಯೊತ್ತಿಗೆ ಉಪವಾಸ ಕೈಬಿಟ್ಟ ಬಳಿಕ ಸೇವಿಸಲು ಬಯಸುವ ಖಾದ್ಯವೆಂದರೆ ಈ ಹಲೀಂ.

ಸೌದಿ ಅರೇಬಿಯನ್ ಮಾದರಿ ಹಲೀಂ ತಯಾರಿಕೆ: ಹೈದರಾಬಾದಿನಲ್ಲಿ ಹಲೀಂ ಖಾದ್ಯ ಭಾರಿ ಖ್ಯಾತಿ ಪಡೆದಿದೆ. ನಾವೀಗ ಸೌದಿ ಅರೇಬಿಯನ್ ಮಾದರಿಯಲ್ಲೇ ಈ ಖಾದ್ಯ ತಯಾರಿಕೆ ಮಾಡಲಾಗುತ್ತಿದೆ. ಹೀಗಾಗಿ ಅರೇಬಿಯನ್ ಚಿಕನ್ ಹಲೀಂ ಎಂದೇ ಹೆಸರಿಡಲಾಗಿದೆ. ಭಾರತೀಯ ಮಸಾಲ ಸೇರಿ ಇತರ ಅಡುಗೆ ಪದಾರ್ಥಗಳನ್ನು ಬಳಕೆ ಮಾಡಿಕೊಂಡೇ ಈ ಹಲೀಂ ತಯಾರಿಸಲಾಗುತ್ತದೆ.

48 ಪದಾರ್ಥಗಳ ಬಳಕೆ: ಚಿಕನ್, ಹುರಿದ ಗೋಧಿ, ಬೇಳೆಕಾಳು, ಗೋಡಂಬಿ, ಒಣಗಿದ ದ್ರಾಕ್ಷಿ, ಲವಂಗ, ಏಲಕ್ಕಿ, ಬಾದಾಮಿ, ಪಿಸ್ತಾ, ಖರ್ಜೂರ, ತುಪ್ಪ ಸೇರಿದಂತೆ 48 ಪದಾರ್ಥಗಳನ್ನು ಹಲೀಂ ಖಾದ್ಯ ತಯಾರಿಸಲು ಬಳಕೆ ಮಾಡಲಾಗುತ್ತದೆ ಎಂದು ಮಹಮ್ಮದ ಅಜೀಮ್ ಮಾಹಿತಿ ನೀಡಿದರು.

ಇವೆಲ್ಲ ಪೌಷ್ಟಿಕಾಂಶವುಳ್ಳ ಪದಾರ್ಥಗಳನ್ನ ಚಿಕನ್ ನೊಂದಿಗೆ ಬೆರೆಸಿ ಹದಬರುವವರೆಗೂ ಸೌದೆ ಒಲೆಯಲ್ಲಿ ಬೇಯಿಸಲಾಗುತ್ತದೆ. ಬೆಳಗ್ಗೆ 7 ಗಂಟೆಗೆ ಹಲೀಂ ತಯಾರಿಕೆ ಕಾರ್ಯ ಶುರುವಾದ್ರೆ ಸಂಜೆ 5 ಗಂಟೆಗೆ ಪೂರ್ಣಗೊಳ್ಳುತ್ತದೆ.

ಮುಸ್ಲಿಂ ಧರ್ಮೀಯರು ತಮಗೆ ಹತ್ತಿರವಾದ ಮಸೀದಿಗಳಲ್ಲಿ ನಮಾಜು (ಪ್ರಾರ್ಥನೆ) ಮಾಡಿ, ನೇರವಾಗಿ ಆಗಮಿಸಿ ಹಲೀಂ ಖಾದ್ಯ ಹಾಗೂ ಮಟನ್, ಚಿಕನ್ ಖರೀದಿಸುತ್ತಾರೆ ಎಂದು ಮಹಮ್ಮದ ಇಕ್ಬಾಲ್ ತಿಳಿಸಿದ್ದಾರೆ.

ಸತತ ಆರೇಳು ವರ್ಷಗಳಿಂದ ನಾನು, ನನ್ನ ಸ್ನೇಹಿತರು ಹಲೀಂ ಖಾದ್ಯ ಸವಿಯಲು ಇಲ್ಲಿಗೆ ಪ್ರತಿ ವರ್ಷವೂ ಬರುತ್ತೇವೆ ಅಂತಾರೆ ಪ್ರಶಾಂತ್​

Intro:ಪವಿತ್ರ ರಂಜಾನ್ ಹಬ್ಬದ ಸಂಭ್ರಮ...
ಗಣಿನಾಡಿನಲ್ಲೂ ಅರೇಬಿಯನ್ ಚಿಕನ್ ಹಲೀಂ ಖಾದ್ಯಗೂ ಹೆಚ್ಚಿದ ಬೇಡಿಕೆ!
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಮುಸ್ಲಿಂ ಧರ್ಮೀಯರ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು
ಎಲ್ಲೆಡೆ ಪಸರಿಸಿದೆ. ಅದರಲ್ಲೂ ಅರೇಬಿಯನ್ ಚಿಕನ್ ಹಲೀಂಗೂ (ಹೈದರಾಬಾದಿನಲ್ಲಿ ಖ್ಯಾತಿ ಹೊಂದಿರುವ
ಹಲೀಂ) ಎಲ್ಲಿಲ್ಲದ ಬಹುಬೇಡಿಕೆ ಶುರುವಾಗಿದೆ.
ಹೌದು, ನೀವು ಕೂಡ ಚಿಕನ್ ಹಲೀಂ ಖಾದ್ಯದ ಸವಿರುಚಿ ನೋಡಬೇಕಾ. ಹಾಗಾದ್ರೆ ಒಮ್ಮೆ ಬಳ್ಳಾರಿ ನಗರದ ಕೌಲ್ ಬಜಾರ್ ಪೊಲೀಸ್ ಠಾಣಾ ಪ್ರದೇಶ ವ್ಯಾಪ್ತಿಯಲ್ಲಿರುವ ಅಜೀಮ್ ಫಾಸ್ಟ್ ಫುಡ್ ಅಂಗಡಿ ಮಳಿಗೆಗೆ ಭೇಟಿ ಕೊಡಿ.
ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯಲ್ಲಿ ಸಂಜೆಯೊತ್ತಿಗೆ ಒಮ್ಮೆ ಸಂಚರಿಸಿದರೆ ಸಾಕು. ಎಲ್ಲೆಡೆಯೂ ಚಿಕನ್ ಹಲೀಂ ಖಾದ್ಯದ ಘಮಲು ನಿಮ್ಮ ಮೂಗಿನ ನೇರಕ್ಕೆ ಬಡಿಯುತ್ತದೆ. ಅದರ ಸುಗಂಧದ ವಾಸನೆಯ ಜಾಡು ಹಿಡಿದು ಅಜೀಮ್ ಫಾಸ್ಟ್ ಫುಡ್ ಸೆಂಟರ್ ನತ್ತ ಹೊರಟವರೇ ಹೆಚ್ಚು.
ಹಲೀಂ ಸವಿಯಲು ಬಲು ಸ್ವಾದಿಷ್ಟಕರ: ಪೌಷ್ಟಿಕಾಂಶವುಳ್ಳ ಹಲೀಂ ಖಾದ್ಯಗೂ ಮುಸ್ಲಿಂ ಧರ್ಮೀಯರ ರಂಜಾನ್ ಹಬ್ಬಕ್ಕೂ ಅವಿನಾಭಾವ ಸಂಬಂಧವಿದ್ದಂತೆ ಕಾಣುತ್ತದೆ. ವಿಶೇಷವಾಗಿ ರಂಜಾನ್ ಹಬ್ಬದ ಸಂದರ್ಭದಲ್ಲೇ ಈ ಖಾದ್ಯದ ಘಮಲು ಎಲ್ಲ ಧರ್ಮೀಯರ ವಿಶೇಷ ಗಮನ ಸೆಳೆಯಲಿದೆ. ರಂಜಾನ್ ಹಬ್ಬ ಶುರುವಾದಾಗಿಂದಲೂ ಮುಸ್ಲಿಂಮರು ವ್ರತಾಚರಣೆಯನ್ನು ಪ್ರಾರಂಭಿಸುತ್ತಾರೆ. ವ್ರತನಿಷ್ಠ ಮುಸ್ಲಿಂಮರು ಸಂಜೆಯೊತ್ತಿಗೆ ಉಪವಾಸ ಕೈಬಿಟ್ಟ ಬಳಿಕ ಸೇವಿಸಲು ಬಯಸುವ ಖಾದ್ಯದಲ್ಲೇ ಈ ಹಲೀಂ ಖಾದ್ಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಹೀಗಾಗಿ, ಹಲೀಂ ಎಂದರೆ ಮುಸ್ಲಿಂ ಧರ್ಮೀಯರಿಗೆ ಬಲುಇಷ್ಟವಂತೆ. ಹಲೀಂ ಖಾದ್ಯ ಸವಿಯಲು ಸ್ವಾದಿಷ್ಠಕರ ಎಂದು ಮುಸ್ಲಿಂ ಧರ್ಮಿಯರ ಅಭಿಪ್ರಾಯವಾಗಿದೆ.
ಸೌದಿ ಅರೇಬಿಯನ್ ಮಾದರಿ ಹಲೀಂ ತಯಾರಿಕೆ: ಹೈದರಾಬಾದಿನಲ್ಲಿ ಹಲೀಂ ಖಾದ್ಯವು ಖ್ಯಾತಿಯನ್ನು
ಪಡೆದಿದ್ದು, ನಾವೀಗ ಸೌದಿ ಅರೇಬಿಯನ್ ಮಾದರಿಯಲ್ಲೇ
ಈ ಖಾದ್ಯವನ್ನು ತಯಾರಿಕೆ ಮಾಡಲಾಗುತ್ತದೆ. ಅರೇಬಿಯನ್ ಚಿಕನ್ ಹಲೀಂ ಎಂದೇ ಹೆಸರಿಸಲಾಗಿದೆ. ಭಾರತೀಯ ಮಸಾಲ ಸೇರಿ ಇತರೆ ಅಡುಗೆ ಪದಾರ್ಥಗಳನ್ನು ಬಳಕೆ ಮಾಡಿಕೊಂಡೇ ಈ ಹಲೀಂ ತಯಾರಿಸಲಾಗುತ್ತದೆ ಎಂದು ಅಜೀಮ್ ಫಾಸ್ಟ್ ಫುಡ್ ನ ಇಕ್ಬಾಲ್ ಅಜೀಮ್ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಜಿಲ್ಲೆಯ ಹೊಸಪೇಟೆ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿ ಸೇರಿದಂತೆ ಇತರೆಡೆಯ ಮುಸ್ಲಿಂ ಮತ್ತು ಹಿಂದೂ ಧರ್ಮೀ ಯರು ಇಲ್ಲಿಗೆ ಆಗಮಿಸಿ ಹಲೀಂ ಖಾದ್ಯ ಸವಿದು ತಮ್ಮೊಂದಿಗೆ ಪಾರ್ಸಲ್ ಕೂಡ ತೆಗೆದುಕೊಂಡು ಹೋಗುತ್ತಾರೆ.
ಕಳೆದ ಇಪ್ಪತ್ತು ವರ್ಷಗಳಿಂದೂ ಹಲೀಂ ಖಾದ್ಯ ತಯಾರಿಸುತ್ತಿ ರುವೆ.‌ ಸೌದಿ ಅರೇಬಿಯನ್ ಮಾದರಿಯಲ್ಲೇ ಈ ಹಲೀಂ ತಯಾರಿಕೆ ಮಾಡುವ ವಿಧಾನದ ಕುರಿತು ತಿಳಿದುಕೊಂಡಿರುವೆ. ಅದೇ ಮಾದರಿಯಲ್ಲೇ ಹಲೀಂ ಖಾದ್ಯ ತಯಾರಿಸುತ್ತಿರುವೆ. ಈಗ ಹಲೀಂ ಖಾದ್ಯಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ ಎಂದರು.‌

Body:48 ಪದಾರ್ಥಗಳು ಬಳಕೆ: ಚಿಕನ್, ಹುರಿದ ಗೋಧಿ, ಬೇಳೆಕಾಳು, ಗೋಡಂಬಿ, ಒಣಗಿದ ದ್ರಾಕ್ಷಿ, ಲವಂಗ, ಏಲಕ್ಕಿ, ಬಾದಾಮಿ, ಪಿಸ್ತಾ, ಖರ್ಜೂರ, ತುಪ್ಪ ಸೇರಿದಂತೆ 48 ಪದಾರ್ಥಗಳನ್ನು ಹಲೀಂ ಖಾದ್ಯ ತಯಾರಿಸಲು ಬಳಕೆ ಮಾಡಲಾಗುತ್ತದೆ ಎಂದು ಮಹಮ್ಮದ ಅಜೀಮ್ ತಿಳಿಸಿದರು.
ಇವೆಲ್ಲ ಪೌಷ್ಟಿಕಾಂಶವುಳ್ಳ ಪದಾರ್ಥಗಳು. ಈ ಪದಾರ್ಥಗ ಳೊಂದಿಗೆ ಚಿಕನ್ ಬೆರೆಸಿ ಹದಬರುವವರೆಗೂ ಸೌದೆ ಒಲೆಯಲ್ಲಿ ಬೇಯಿಸಲಾಗುತ್ತದೆ. ಬೆಳಿಗ್ಗೆ 7 ಗಂಟೆಗೆ ಹಲೀಂ ತಯಾರಿಕೆ ಕಾರ್ಯ ಶುರುವಾದ್ರೆ ಸಂಜೆ 5 ಗಂಟೆಗೆ ಪೂರ್ಣಗೊಳ್ಳುತ್ತದೆ ಎಂದರು ಇಕ್ಬಾಲ್.
ನೂರಾರು ಮಂದಿ ಭೇಟಿ: ಮುಸ್ಲಿಂ ಧರ್ಮೀಯರು ತಮಗೆ ಹತ್ತಿರವಾದ ಮಸೀದಿಗಳಲ್ಲಿ ನಮಾಜು (ಪ್ರಾರ್ಥನೆ) ಮಾಡಿ, ನೇರವಾಗಿ ಈ ಅಜೀಮ್ ಫಾಸ್ಟ್ ಫುಡ್ ಸೆಂಟರ್ ಗೆ ನೂರಾರು ಮಂದಿ ಮುಸ್ಲಿಂಧರ್ಮೀಯರು ಆಗಮಿಸಿದಾಗ ಹಲೀಂ ಖಾದ್ಯ ಹಾಗೂ ಮಟನ್, ಚಿಕನ್ ಖರೀದಿಸುತ್ತಾರೆ ಎಂದು ಮಹಮ್ಮದ ಇಕ್ಬಾಲ್ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಹಲೀಂ ಖಾದ್ಯ ಸೂಪರ್: ಸತತ ಆರೇಳು ವರ್ಷಗಳಿಂದ ನಾನು, ನನ್ನ ಸ್ನೇಹಿತರು ಹಲೀಂ ಖಾದ್ಯ ಸವಿಯಲು ಇಲ್ಲಿಗೆ ಪ್ರತಿವರ್ಷವೂ ಬರುತ್ತೇವೆ. ನಮ್ಮ ಕೆಲಸ, ಕಾರ್ಯಗಳಲ್ಲಿ
ಎಷ್ಟೇ ಬ್ಯುಸಿಯಾಗಿದ್ದರೂ ಇಲ್ಲಿಗೆ ಬಂದೇ ಹಲೀಂ ಸೇವನೆ ಮಾಡಿ ಹೋಗುತ್ತವೆ ಎಂದು ಗಾಂಧಿನಗರ ಪ್ರದೇಶ ವ್ಯಾಪ್ತಿಯ ಹೌಸಿಂಗ್ ಬೋರ್ಡ್ ಕಾಲೊನಿಯ ಪ್ರಶಾಂತ ಈ ಟಿವಿ
ಭಾರತ್ ಗೆ ತಿಳಿಸಿದ್ದಾರೆ.

Conclusion:KN_BLY_01_27_ARABIYAN_CHIKAN_ALIM_STORY_7203310

KN_BLY_01a_27_ARABIYAN_CHIKAN_ALIM_STORY_7203310

KN_BLY_01b_27_ARABIYAN_CHIKAN_ALIM_STORY_7203310

KN_BLY_01c_27_ARABIYAN_CHIKAN_ALIM_STORY_7203310

KN_BLY_01d_27_ARABIYAN_CHIKAN_ALIM_STORY_7203310

KN_BLY_01e_27_ARABIYAN_CHIKAN_ALIM_STORY_BYTE_7203310

KN_BLY_01f_27_ARABIYAN_CHIKAN_ALIM_STORY_BYTE_7203310

KN_BLY_01g_27_ARABIYAN_CHIKAN_ALIM_STORY_BYTE_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.