ETV Bharat / state

ಅನೈತಿಕ ಸಂಬಂಧ: ಕೂಡ್ಲಿಗಿಯಲ್ಲಿ ದುರಂತ ಅಂತ್ಯ ಕಂಡ ಮಹಿಳೆ-ಪುರುಷ! - ಬಳ್ಳಾರಿ ಲೆಟೆಸ್ಟ್ ನ್ಯೂಸ್

ಅನೈತಿಕ ಸಂಬಂಧದಿಂದ ಮಹಿಳೆ-ಪುರುಷ ದುರಂತ ಅಂತ್ಯ ಕಂಡಿದ್ದಾರೆ. ಕೂಡ್ಲಿಗಿ ತಾಲೂಕಿನ ಬಂಡ್ರಿ ಗ್ರಾಮದ ತಿಮ್ಮಪ್ಪನ ಗುಡ್ಡದಲ್ಲಿ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Immoral relationship: Two are commit suicide by consuming poison
ಅನೈತಿಕ ಸಂಬಂಧ: ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ!
author img

By

Published : May 24, 2020, 4:41 PM IST

Updated : May 24, 2020, 4:57 PM IST

ಬಳ್ಳಾರಿ: ಅನೈತಿಕ ಸಂಬಂಧದಿಂದ ಮಹಿಳೆ ಮತ್ತು ಪುರುಷ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ.

ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡ್ರಿ ಗ್ರಾಮದ ತಿಮ್ಮಪ್ಪನ ಗುಡ್ಡದಲ್ಲಿ ಮದ್ದಪ್ಪ ಮತ್ತು ಶಾಂತಮ್ಮ ವಿಷ ಸೇವಿಸಿದ್ದಾರೆ. ಮದ್ದಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಶಾಂತಮ್ಮ ಕೂಡ್ಲಿಗಿ ತಾಲೂಕು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ ಎಂದು ಕೂಡ್ಲಿಗಿ ಪೊಲೀಸರು ತಿಳಿಸಿದ್ದಾರೆ.

ಮದ್ದಪ್ಪ ಅವರ ಅಣ್ಣ ಸಿದ್ದಪ್ಪ ಈ ಕುರಿತು ದೂರು ನೀಡಿದ್ದಾರೆ. ಸ್ಥಳಕ್ಕೆ ಕೂಡ್ಲಿಗಿ ಪೊಲೀಸ್​ ಠಾಣೆಯ ಪಿ.ಎಸ್.ಐ ತಿಮ್ಮಣ್ಣ ಎಸ್ ಚಾಮನೂರು ಮತ್ತು ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : May 24, 2020, 4:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.